ಕ್ರೀಡೆ

ನನ್ನನ್ನು ಪುತ್ರಿ ಪರಿಪೂರ್ಣ ವ್ಯಕ್ತಿಯಾಗಿ ಬದಲಾಯಿಸಿದಳು; ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ

Pinterest LinkedIn Tumblr


ಮುಂಬಯಿ: ಝಿವಾ ನನ್ನನ್ನು ಓರ್ವ ಪರಿಪೂರ್ಣ ವ್ಯಕ್ತಿಯಾಗಿ ಬದಲಾಯಿಸಿದಳು. ಹೆಣ್ಣುಮಕ್ಕಳು ತಂದೆಗೆ ಹೆಚ್ಚು ನಿಕಟವಾಗಿರುತ್ತಾರೆ. ಅದರಂತೆ ಝಿವಾ ನನಗೆ ಪ್ರತಿಬಾರಿಯೂ ವಿಶೇಷ ಆದ್ಯತೆ ನೀಡುತ್ತಾಳೆ ಎಂದು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಝಿವಾ ಧೋನಿ ಜತೆ ಕಾಣಿಸಿಕೊಳ್ಳುತ್ತಿದ್ದಳು. ಕ್ರಿಕೆಟ್‌ನಿಂದಾಗಿ ಬಹುತೇಕ ಸಂದರ್ಭದಲ್ಲಿ ಮಗಳ ಜತೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಪಂದ್ಯದ ನಂತರ ಆಕೆಯ ಜತೆ ಸಮಯ ಕಳೆಯುವುದನ್ನು ತಪ್ಪಿಸುತ್ತಿರಲಿಲ್ಲ ಎಂದು ಧೋನಿ ತಿಳಿಸಿದ್ದಾರೆ.

ಆಕೆ ಊಟ ಮಾಡದೇ ಇದ್ದಾಗ, ಹಠ ಮಾಡಿದಾಗ, ಅಪ್ಪ ಬರುತ್ತಾರೆ, ಊಟ ಮಾಡು, ಇಲ್ಲವೇ ಸುಮ್ಮನಿರು ಎಂದರೆ ಝಿವಾ ಅದನ್ನು ಪಾಲಿಸುತ್ತಿದ್ದಳು.

ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಗ್ರೌಂಡ್‌ಗೆ ಹೋಗಬೇಕೆನ್ನುವುದು ಆಕೆಯ ಇಚ್ಛೆಯಾಗಿತ್ತು. ಅದರಂತೆ ಆಕೆಯನ್ನು ಪಂದ್ಯದ ಬಳಿಕ ಅಲ್ಲಿಗೆ ಕರೆದೊಯ್ಯುತ್ತಿದೆ. ಅಲ್ಲಿ ಸಮಯ ಕಳೆಯುವುದು ಆಕೆಗೆ ಖುಷಿ ಕೊಡುತ್ತಿತ್ತು ಎಂದು ಧೋನಿ ಹೇಳಿದ್ದಾರೆ.

ತಂಡದಲ್ಲಿನ ಇತರ ಆಟಗಾರರ ಮಕ್ಕಳ ಜತೆ ಝಿವಾ ಆಟವಾಡುತ್ತಿದ್ದಳು, ಸಮಯ ಕಳೆಯುತ್ತಿದ್ದಳು, ಅದನ್ನು ನೋಡಿ ನಮಗೆ ರಿಲ್ಯಾಕ್ಸ್ ಆಗುತ್ತಿತ್ತು ಎಂದು ಧೋನಿ ತಿಳಿಸಿದ್ದು, ಮಗಳೊಂದಿಗಿದ್ದರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ ಎಂದಿದ್ದಾರೆ. ಜತೆಗೆ ಹಲವು ಸಂದರ್ಭದಲ್ಲಿ ಮಗಳೊಂದಿಗಿನ ಸುಂದರ ಕ್ಷಣಗಳನ್ನು ಸಾಮಾಜಿಕ ತಾಣಗಳಲ್ಲೂ ಪೋಸ್ಟ್ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Comments are closed.