ಕ್ರೀಡೆ

ಜಿಮ್‌ನಲ್ಲಿ ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ಕಸರತ್ತು

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಫಿಟ್ಟೆಸ್ಟ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಫಿಟ್ನೆಸ್ ಕಾಯ್ದುಕೊಳ್ಳುವುದರತ್ತ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಜತೆಗೆ ತಮ್ಮ ಅಭಿಮಾನಿಗಳಿಗೂ ಸದಾ ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತಿರುತ್ತಾರೆ.

ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಧರ್ಮಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆಗೆ ಜಿಮ್‌ನಲ್ಲಿ ಕಸರತ್ತು ಮಾಡುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಜಿಮ್‌ನಲ್ಲಿ ನನ್ನ ಜತೆ ಯಾರು ವರ್ಕೌಟ್ ಮಾಡುತ್ತಿದ್ದಾರೆ ನೋಡಿ ಎಂದು ಹೇಳುತ್ತಾ ವಿರಾಟ್ ಕ್ಯಾಮೆರಾವನ್ನು ಅನುಷ್ಕಾ ಅವರತ್ತ ತಿರುಗಿಸುತ್ತಾರೆ. ಬಾಸ್ ತರಹನೇ ವರ್ಕೌಟ್ ಮಾಡುವ ಅನುಷ್ಕಾ ತನಗಿಂತಲೂ ಹೆಚ್ಚು ಅಭ್ಯಾಸ ಮಾಡಬಲ್ಲಳು ಎಂದು ವಿರಾಟ್ ತಿಳಿಸುತ್ತಾರೆ.

ಹಾಗೆಯೇ ಜತೆಯಾಗಿ ಅಭ್ಯಾಸ ಮಾಡುವುದು ಇನ್ನು ಉತ್ತಮ ಅನುಭವ ನೀಡುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಅಂದ ಹಾಗೆ ಕುತ್ತಿಗೆ ನೋವಿನಿಂದಾಗಿ ಇಂಗ್ಲಿಂಷ್ ಕೌಂಟಿಯಿಂದ ಹಿಂಜರಿಯಲು ವಿರಾಟ್ ನಿರ್ಧರಿಸಿದ್ದರು. ಇದೀಗ ಜೂನ್ 15ರಂದು ನಡೆಯಲಿರುವ ಬಿಸಿಸಿಐ ಫಿಟ್ನೆಸ್ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ತದಾ ಬಳಿಕ ಟೀಮ್ ಇಂಡಿಯಾ ಜತೆ ಆಂಗ್ಲ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.

Comments are closed.