ಕ್ರೀಡೆ

ಚೆನ್ನೈ ಸೂಪರ್ ಕಿಂಗ್ಸ್’ಗೆ ಐಪಿಎಲ್ 2018ರ ‘ಚಾಂಪಿಯನ್ಸ್’ ಕಿರೀಟ ! ಫಲ ನೀಡದ ಯೂಸುಫ್‌ ಪಠಾಣ್, ಕೇನ್ ವಿಲಿಯಮ್ಸನ್‌ ಆಟ

Pinterest LinkedIn Tumblr

ಮುಂಬೈ: ತೀವ್ರ ಕುತೂಹಲೆ ಕೆರಳಿಸಿದ್ದ ಐಪಿಎಲ್ 2018ರ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ, ಐಪಿಎಲ್ ಪ್ರಶಸ್ತಿಗೆ ಮುತ್ತಿಟ್ಟಿದೆ.

ಫೈನಲ್‌ ಪಂದ್ಯದಲ್ಲಿ ಆಲ್‌ ರೌಂಡರ್ ವಾಟ್ಸನ್ (ಅಜೇಯ 117; 57ಎ, 11ಬೌಂ, 8ಸಿ) ಗಳಿಸಿದ ಶತಕದ ಬಲದಿಂದ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಸಿಎಸ್‌ಕೆ 8 ವಿಕೆಟ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಜಯಿಸಿತು. ಐಪಿಎಲ್‌ನಲ್ಲಿ ಮೂರನೇ ಸಲ ಕಪ್ ಗೆದ್ದ ಸಾಧನೆ ಮಾಡಿತು.

ಈ ಟೂರ್ನಿಯ ಇಬ್ಬರು ‘ಚಾಣಾಕ್ಷ’ ನಾಯಕರ ಕದನವೆಂದೇ ಈ ಪಂದ್ಯವನ್ನು ಬಿಂಬಿಸಲಾಗಿತ್ತು. ಕಡೆಗೂ ‘ಕೂಲ್‌ ಕ್ಯಾಪ್ಟನ್’ ದೋನಿ ಮೇಲುಗೈ ಸಾಧಿಸಿದರು. ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶಿಸ್ತಿನ ದಾಳಿ ನಡೆ ಸಿದ ಬೌಲರ್‌ಗಳು ಸನ್‌ರೈಸರ್ಸ್‌ ತಂಡವು ಬೃಹತ್ ಮೊತ್ತ ಗಳಿಸದಂತೆ ನೋಡಿಕೊಂಡರು. ನಾಯಕ ಕೇನ್ ವಿಲಿಯಮ್ಸನ್‌ (47; 36 ಎ, 2 ಸಿ, 5 ಬೌಂ) ಮತ್ತು ಯೂಸುಫ್ ಪಠಾಣ್ (ಅಜೇಯ 45; 25 ಎ, 2 ಸಿ, 4 ಬೌಂ) ಅವರ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 178 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಸೂಪರ್ ಕಿಂಗ್ಸ್‌ 18.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 181 ರನ್‌ ಗಳಿಸಿ ಜಯಿಸಿತು. ಡ್ವೇನ್‌ ಬ್ರಾವೊ ಅವರ ಹಾಡು, ಕುಣಿತ ರಂಗೇರಿತು.

ಚೆನ್ನೈ ತಂಡ ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಸಿಲುಕಿ ಎರಡು ವರ್ಷ ನಿಷೇಧ ಶಿಕ್ಷೆ ಪೂರೈಸಿತ್ತು. ಅದರ ನಂತರ ಆಡಿದ ಮೊದಲ ಟೂರ್ನಿ ಇದಾಗಿತ್ತು.

ವಿರಾಟ್ ದಾಖಲೆ ಸರಿಗಟ್ಟಿದ ವಾಟ್ಸನ್‌: ಈ ಟೂರ್ನಿಯಲ್ಲಿ ಎರಡನೇ ಶತಕ ದಾಖಲಿಸಿದ ವಾಟ್ಸನ್‌ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದರು. ಐಪಿಎಲ್ ನಲ್ಲಿ ಒಟ್ಟು ನಾಲ್ಕು ಶತಕ ಗಳಿಸಿದ ಶ್ರೇಯ ಅವರದ್ದಾಯಿತು. 2016ರಲ್ಲಿ ಕೊಹ್ಲಿ ನಾಲ್ಕು ಶತಕ ಹೊಡೆದಿದ್ದರು. ಕ್ರಿಸ್‌ ಗೇಲ್ ಒಟ್ಟು ಆರು ಶತಕ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಪಠಾಣ್ ಮಿಂಚು: ಸನ್‌ರೈಸರ್ಸ್‌ ತಂಡದ ಯೂಸುಫ್‌ ಪಠಾಣ್‌ ಸ್ಫೋಟಕ ಬ್ಯಾಟಿಂಗ್‌ ಮಾಡಿದರು.

ಶಕೀಬ್ ಮತ್ತು ಯೂಸುಫ್ ಅವರ ಜೊತೆಯಾಟದಲ್ಲಿ 32 ರನ್‌ಗಳು ಹರಿದು ಬಂದವು.

ವಿಲಿಯಮ್ಸನ್‌ ಬಳಗವನ್ನು ನಿಯಂತ್ರಿಸಲು ಪರದಾಡಿದ ಬೌಲರ್‌ಗಳು 16 ಮತ್ತು 17ನೇ ಓವರ್‌ನಲ್ಲಿ ಆಧಿಪತ್ಯ ಮಿಂಚಿದರು. ಶಕೀಬ್‌ ಮತ್ತು ದೀಪಕ್ ಹೂಡಾ ಅವರ ವಿಕೆಟ್ ಕಬಳಿಸಿದರು. ಆದರೆ ನಂತರ ಯೂಸುಫ್ ಜೊತೆಗೂಡಿದ ಕಾರ್ಲೋಸ್ ಬ್ರಾಥ್‌ವೇಟ್‌ 11 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳು ಒಳಗೊಂಡ 21 ರನ್‌ ಗಳಿಸಿ ಉತ್ತಮ ಮೊತ್ತ ಗಳಿಸಲು ನೆರವಾದರು.

ಡ್ವೇನ್ ಬ್ರಾವೊ ನಾಲ್ಕು ಓವರ್‌ಗಳಲ್ಲಿ 46 ರನ್ ನೀಡಿದರೆ ಶಾರ್ದೂಲ್ ಠಾಕೂರ್‌ ಮೂರು ಓವರ್‌ಗಳಲ್ಲಿ 31 ರನ್‌ ಬಿಟ್ಟುಕೊಟ್ಟರು.

Comments are closed.