ಕ್ರೀಡೆ

ನಾಳೆ ಐಪಿಎಲ್ ಚಾಂಪಿಯನ್ ಪಟ್ಟಕ್ಕಾಗಿ ಚೆನ್ನೈ-ಹೈದರಾಬಾದ್ ಮಧ್ಯೆ ಹಣಾಹಣಿ ! ಗೆಲುವು ಯಾರಿಗೆ ?

Pinterest LinkedIn Tumblr

ಮುಂಬೈ: 2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫೈನಲ್ ಹಂತಕ್ಕೆ ಬಂದು ತಲುಪಿದ್ದು ಈ ಬಾರಿ ಫೈನಲ್ ನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೇನ್ ವಿಲಿಯಮ್ಸನ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ.

ಈ ಬಾರಿಯ ಐಪಿಎಲ್ ನಲ್ಲಿ ಈ ಎರಡು ತಂಡಗಳು ಬಲಿಷ್ಠ ತಂಡವಾಗಿದ್ದು ನಾಳೆ ಮುಂಬೈನಲ್ಲಿ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಯಾರಾಗ್ತಾರೆ ಎಂಬ ಕುತೂಹಲ ಕೆರಳಿಸಿದೆ.

ಅಂಕಪಟ್ಟಿಯಲ್ಲಿ ಮೊದಲೆರೆಡು ಸ್ಥಾನಗಳಲ್ಲಿದ್ದ ಹೈದರಾಬಾದ್ ಮತ್ತು ಚೆನ್ನೈ ನಡುವೆ ನಡೆದ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡ 2 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿತ್ತು. ಇದರಿಂದಾಗಿ ಚೆನ್ನೈ ತಂಡಕ್ಕೆ ಗೆಲುವಿನ ಆಶಾಭಾವ ಹೆಚ್ಚಿದೆ. ಇನ್ನು ಹೈದರಾಬಾದ್ ತಂಡದಲ್ಲಿ ರಶೀದ್ ಖಾನ್ ಸ್ಪಿನ್ ದಾಳಿ ತಂಡಕ್ಕೆ ಆನೆ ಬಲ ನೀಡಿದೆ. ಹೀಗೆ ಉಭಯ ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದ್ದು ಇಬ್ಬರ ನಡುವೆ ರೋಚಕ ಹಣಾಹಣಿಯಂತೂ ನಡೆದೆ ತೀರುತ್ತದೆ.

ಹೈದರಾಬಾದ್ ತಂಡ ಆಡಿರುವ 16 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

Comments are closed.