ಕ್ರೀಡೆ

ಐಪಿಎಲ್ 2018ರಲ್ಲಿ ಮುಂಬೈ ಇಂಡಿಯನ್ಸ್ ಸೋಲನ್ನು ಸಂಭ್ರಮಿಸಿದ ಬಾಲಿವುಡ್ ನಟಿ ಪ್ರೀತಿ ಜಿಂಟಾ!

Pinterest LinkedIn Tumblr


ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ 2018 ಪ್ಲೇ-ಆಫ್ ಪ್ರವೇಶಿಸಲು ವಿಫಲವಾಗಿರಬಹುದು. ಆದರೆ ಫ್ರಾಂಚೈಸಿ ಸಹ-ಮಾಲೀಕಳಾದ ಪ್ರೀತಿ ಜಿಂಟಾ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಲಿಗ್ ಹಂತದಿಂದ ಮುಂದಕ್ಕೆ ಹೋಗದಿರುವುದಕ್ಕೆ ಸಂಭ್ರಮಿಸುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ವೈರಲ್ ಆಗಿ ಹರಿದಾಡುತ್ತಿದೆ.

ಭಾನುವಾರ ಟ್ವಿಟರ್‌ನಲ್ಲಿ ವೈರಲ್ ಆದ ವಿಡಿಯೋದಲ್ಲಿ ಹಿಂದಿ ಸಿನಿಮಾ ತಾರೆ ಸಹವರ್ತಿ ಕಿಂಗ್ಸ್11 ಪಂಜಾಬ್ ಸದಸ್ಯರ ಕಡೆಗೆ ತಿರುಗಿ ನೋಡಿ ” ಮುಂಬೈ ಫೈನಲ್‌ಗೆ ಹೋಗುತ್ತಿಲ್ಲ … ನಿಜವಾಗಿಯೂ ಖುಷಿಯಾಗಿದ್ದೇನೆ”, ಎಂದು ಹೇಳುತ್ತಿರುವುದು ಕಂಡು ಬಂದಿದೆ.

@jogtweets ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಟ್ವೀಟ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ ಕಳೆದ ಐದು ವರ್ಷಗಳಲ್ಲಿ 3 ಬಾರಿ ಐಪಿಎಲ್ ಕಪ್ ಎತ್ತಿ ಹಿಡಿದಿದೆ. ಆದರೆ ಭಾನುವಾರ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಸೋತು ಪ್ಲೇ ಆಫ್ ರೇಸ್‌ಗೆ ಮುನ್ನುಗ್ಗುವಲ್ಲಿ ಎಡವಿದೆ.

Comments are closed.