ಕ್ರೀಡೆ

ಶಶಾಂಕ್‌ ಮನೋಹರ್‌ ಐಸಿಸಿ ಅಧ್ಯಕ್ಷರಾಗಿ ಪುನರಾಯ್ಕೆ

Pinterest LinkedIn Tumblr


ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಅಧ್ಯಕ್ಷರಾಗಿ ಭಾರತದ ಶಶಾಂಕ್‌ ಮನೋಹರ್‌ ಪುನರಾಯ್ಕೆಯಾಗಿದ್ದಾರೆ.

2016ರಲ್ಲಿ ಶಶಾಂಕ್‌ ಮನೋಹರ್‌ ಮೊದಲ ಬಾರಿಗೆ ಐಸಿಸಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಎರಡು ವರ್ಷಗಳ ಆಡಳಿತ ನಡೆಸಿದ್ದರು. ಇದೀಗ ಎರಡನೇ ಅವಧಿಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ಎರಡು ವರ್ಷಗಳ ವರೆಗೆ ಶಶಾಂಕ್‌ ಮನೋಹರ್‌ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಶಶಾಂಕ್‌ ಮನೋಹರ್‌ ಕ್ರಿಕೆಟ್‌ ಆಡಳಿತದಲ್ಲಿ ಕ್ರಾಂತಿಯುತ ನಡೆ ಪ್ರದರ್ಶಿಸಿ ಅನೇಕ ಸುಧಾರಣೆಗಳನ್ನು ತಂದಿದ್ದರು. ಐಸಿಸಿಗೆ ಮೊದಲ ಸ್ವಾವಲಂಬಿ, ಸ್ವತಂತ್ರ್ಯ ಮಹಿಳಾ ಅಭ್ಯರ್ಥಿಯನ್ನು ನಿರ್ದೇಶಕರಾಗಿ ಆಯ್ಕೆ ಮಾಡಿದರು.

ತಮ್ಮ ಪುನರಾಯ್ಕೆ ಕುರಿತಂತೆ ಪ್ರತಿಕ್ರಿಯಿಸಿರುವ ಶಶಾಂಕ್‌ ಮನೋಹರ್‌, “ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಗೆ ಪುನರಾಯ್ಕೆಗೊಂಡಿರುವುದು ಅತ್ಯಂತ ದೊಡ್ಡ ಗೌರವದ ವಿಷಯ. ಅಧಿಕಾರವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಹಲವು ಬದಲಾವಣೆ ಮಾಡುವ ಮೂಲಕ ಕ್ರಿಕೆಟ್‌ ಬೆಳವಣಿಗೆಗೆ ಇನ್ನಷ್ಟು ಕೆಲಸ ನಿರ್ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದಿದ್ದಾರೆ.

Comments are closed.