ಕ್ರೀಡೆ

‘ವಿರಾಟ್ ಕೊಹ್ಲಿ ಮಾಡಿದ ಸಾಧನೆಯನ್ನು ಸ್ವತಃ ಸಚಿನ್ ತೆಂಡೂಲ್ಕರ್ ಕೂಡ ಮಾಡಲು ಆಗಿಲ್ಲ’

Pinterest LinkedIn Tumblr

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮಾಡಿದ್ದನ್ನು ಸ್ವತಃ ಟೀಂ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಕೈಯಲ್ಲು ಮಾಡಲು ಸಾಧ್ಯವಾಗಲಿಲ್ಲ ಎಂದು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಶೇನ್ ವಾರ್ನ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಕ್ರಿಕೆಟ್ ನ ಮೂರು ಮಾದರಿಗಳಲ್ಲೂ ಅತ್ಯುತ್ತಮ ಸಾಧನೆಗಳನ್ನು ಮಾಡಿದ್ದಾರೆ ಎಂದು ಇಬ್ಬರು ಆಟಗಾರರನ್ನು ಶೇನ್ ವಾರ್ನ್ ಪ್ರಶಂಸಿಸಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ಚೇಸಿಂಗ್ ನಲ್ಲಿ ವಿರಾಟ್ ಕೊಹ್ಲಿ ಅತೀ ಹೆಚ್ಚು ಶತಕ(19) ಅಂದರೆ ಸಚಿನ್ ಗಿಂತ ಎರಡು ಶತಕ ಹೆಚ್ಚು ಸಿಡಿಸಿದ್ದಾರೆ. ಅಲ್ಲದೆ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರ ಪೈಕಿ ವಿರಾಟ್ ಕೊಹ್ಲಿ(35) ಶತಕ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ 51 ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ ಎಂದರು.

ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಟದ ವೈಖರಿಯನ್ನು ನಾನು ನೋಡಿದ್ದೇನೆ. ಚೇಸಿಂಗ್ ವೇಳೆ ಅವರ ಶತಕಗಳು ನನ್ನಲ್ಲಿ ಅಚ್ಚರಿ ಮೂಡಿಸಿವೆ. ಇನ್ನು ಶತಕ ಗಳಿಕೆಯಲ್ಲಿ ಸಚಿನ್ ಗಿಂತ ಕೊಹ್ಲಿ ಸಾಧನೆ ಅಪಾರ ಎಂದು ಶೇನ್ ವಾರ್ನ್ ಹೇಳಿದ್ದಾರೆ.

Comments are closed.