ಕ್ರೀಡೆ

ಬಟ್ಲರ್ ಬಿರುಸಿನ ಆಟಕ್ಕೆ ತಲೆಬಾಗಿದ ಮುಂಬೈ; ರಾಜಸ್ಥಾನಕ್ಕೆ ಪ್ಲೇ ಆಫ್ ಕನಸು ಜೀವಂತ: ರೇಸ್’ನಿಂದ ಮುಂಬೈ ಔಟ್ !

Pinterest LinkedIn Tumblr

 

ಮುಂಬೈ: ಹ್ಯಾಟ್ರಿಕ್ ಗೆಲುವು ಸಾಧಿಸಿ ನಿರೀಕ್ಷೆ ಹುಟ್ಟಿಸಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇಆಫ್ ಕನಸು ಭಗ್ನಗೊಂಡಿದೆ. 8ವಿಕೇಟ್’ಗಳಿಂದ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಕನಸನ್ನು ಉಳಿಸಿಕೊಂಡಿದೆ.

ಮುಂಬೈ ನೀಡಿದ 169 ರನ್’ಗಳ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ 18 ಓವರ್’ಗಳಲ್ಲಿ ಗುರಿ ತಲುಪಿತು. ಆಕರ್ಷಕ ಅರ್ಧ ಶತಕ ಸಿಡಿಸಿದ ಬಟ್ಲರ್ ಗೆಲುವಿನ ರುವಾರಿಯಾದರು. 53 ಎಸೆತಗಳ 94 ರನ್’ಗಳ ಅವರ ಆಟದಲ್ಲಿ 5 ಸಿಕ್ಸ್ 9 ಬೌಂಡರಿಗಳಿದ್ದವು.

ಈ ಗೆಲುವಿನೊಂದಿಗೆ ಅಜಿಂಕ್ಯ ರಹಾನೆ ಬಳಗ ‘ಪ್ಲೇ ಆಫ್‌’ ಪ್ರವೇಶಿಸುವ ಆಸೆ ಜೀವಂತವಾಗಿಟ್ಟುಕೊಂಡಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168ರನ್‌ ಗಳಿಸಿತು. ಸವಾಲಿನ ಗುರಿಯನ್ನು ರಾಯಲ್ಸ್‌ 18 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ರಾಜಸ್ಥಾನ್‌ ರಾಯಲ್ಸ್‌: 18 ಓವರ್‌ಗಳಲ್ಲಿ 3 ವಿಕೆಟ್‌ಗೆ 171 (ಜಾಸ್‌ ಬಟ್ಲರ್‌ ಔಟಾಗದೆ 94, ಅಜಿಂಕ್ಯ ರಹಾನೆ 37, ಸಂಜು ಸ್ಯಾಮ್ಸನ್‌ 26; ಜಸ್‌ಪ್ರೀತ್‌ ಬೂಮ್ರಾ 34ಕ್ಕೆ1, ಹಾರ್ದಿಕ್‌ ಪಾಂಡ್ಯ 52ಕ್ಕೆ2).

Comments are closed.