ಕ್ರೀಡೆ

ಐಪಿಎಲ್‌‌ನಲ್ಲಿ ದಾಖಲೆ ಬರೆದ ಮುಂಬಯಿ ಇಂಡಿಯನ್ಸ್ ತಂಡದ ಇಶಾನ್ ಕಿಶಾನ್!

Pinterest LinkedIn Tumblr

ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಅತಿ ವೇಗದ ಅರ್ಧಶತಕ ದಾಖಲಿಸಿದ ದಾಖಲೆಗೆ ಇಶಾನ್ ಕಿಶಾನ್ ಪಾತ್ರವಾಗಿದ್ದಾರೆ.

ಐಪಿಎಲ್‌ನ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಕೆಎಲ್ ರಾಹುಲ್ ಹೆಸರಲ್ಲಿದೆ. ಪ್ರಸಕ್ತ ಸಾಲಿನ ಐಪಿಎಲ್‌ನಲ್ಲೇ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ರಾಹುಲ್ ಕೇವಲ 14 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.

ಇದೀಗ 17 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಇಶಾನ್ ಜಂಟಿಯಾಗಿ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. ಹಾಗೆಯೇ ಪ್ರಸಕ್ತ ಸಾಲಿನಲ್ಲಿ ನರೈನ್ ಜತೆಗೆ ಎರಡನೇ ಅತಿ ವೇಗದ ಫಿಫ್ಟಿ ಬಾರಿಸಿದ ಗೌರವಕ್ಕೂ ಪಾತ್ರವಾಗಿದ್ದಾರೆ.

ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ಪರ ಇಶಾನ್ ಕಿಶಾನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

19ರ ಹರೆಯದ ವಿಕೆಟ್ ಕೀಪರ್ ಎಡಗೈ ಬ್ಯಾಟ್ಸ್‌ಮನ್ ಆಗಿರುವ ಇಶಾನ್ ಕೇವಲ 17 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ಅಂತಿಮವಾಗಿ 21 ಎಸೆತಗಳನ್ನು ಎದುರಿಸಿದ ಇಶಾನ್ ಐದು ಬೌಂಡರಿ ಹಾಗೂ ಆರು ಮನಮೋಹಕ ಸಿಕ್ಸರ್‌ಗಳ ನೆರವಿನಿಂದ 62 ರನ್ ಗಳಿಸಿದ್ದರು.

ಐಪಿಎಲ್‌ನ ಅತಿ ವೇಗದ ಅರ್ಧಶತಕಗಳ ಪಟ್ಟಿ ಇಂತಿದೆ:

ಕೆಎಲ್ ರಾಹುಲ್: 14 ಎಸೆತ (2018)
ಸುನಿಲ್ ನರೈನ್: 15 ಎಸೆತ (2017)
ಯೂಸುಫ್ ಪಠಾಣ್: 15 ಎಸೆತ (2014)
ಸುರೇಶ್ ರೈನಾ: 16 ಎಸೆತ (2014)
ಇಶಾನ್ ಕಿಶಾನ್: 17 ಎಸೆತ (2018)
ಕ್ರಿಸ್ ಗೇಲ್: 17 ಎಸೆತ (2013)
ಸುನಿನ್ ನರೈನ್: 17 ಎಸೆತ (2018)
ಕೀರಾನ್ ಪೊಲಾರ್ಡ್: 17 ಎಸೆತ (2016)
ಕ್ರಿಸ್ ಮೊರಿಸ್: 17 ಎಸೆತ (2016)
ಆ್ಯಡಂ ಗಿಲ್‌ಕ್ರಿಸ್ಟ್: 17 ಎಸೆತ (2009)

Comments are closed.