ಕ್ರೀಡೆ

ಸತತ 2 ಎಸೆತಗಳಲ್ಲಿ 2 ಕ್ಯಾಚ್ ಕೈಚೆಲ್ಲಿದ ಜಡೇಜಾ !

Pinterest LinkedIn Tumblr

ಕೋಲ್ಕೊತಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸತತ ಎರಡು ಎಸೆತಗಳಲ್ಲಿ ಎರಡು ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ರವೀಂದ್ರ ಜಡೇಜಾ ಹಿನ್ನಡೆಗೊಳಗಾಗಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ಐದು ವಿಕೆಟ್ ನಷ್ಟಕ್ಕೆ 177 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

ಬಳಿಕ ಕೆಕೆಆರ್ ದ್ವಿತೀಯ ಇನ್ನಿಂಗ್ಸ್ ವೇಳೆಯಲ್ಲಿ ಸಿಎಸ್‌ಕೆ ಬೌಲರ್ ಕೆಎಂ ಆಸಿಫ್ ಅವರ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಸುಲಭ ಕ್ಯಾಚ್‌ಗಳನ್ನು ಜಡೇಜಾ ಕೈಚೆಲ್ಲಿದ್ದರು.

ಎರಡನೇ ಓವರ್‌ನ ಐದನೇ ಹಾಗೂ ಆರನೇ ಎಸೆತಗಳಲ್ಲಿ ಸುನಿಲ್ ನರೈನ್ ಕ್ಯಾಚ್ ಹಿಡಿಯುವಲ್ಲಿ ಜಡೇಜಾ ವಿಫಲವಾದರು. ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ನರೈನ್ 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 32 ರನ್ ಗಳಿಸಿದರು.

ಅಂತಿಮವಾಗಿ ಸುನಿಲ್ ನರೈನ್ ವಿಕೆಟ್ ಪಡೆಯುವಲ್ಲಿ ಜಡೇಜಾ ಯಶಸ್ವಿಯಾಗಿದ್ದರು. ಈ ಮೂಲಕ ಸೇಡು ತೀರಿಸಿಕೊಂಡರು.

ಒಟ್ಟಾರೆಯಾಗಿ ಸಿಎಸ್‌ಕೆ ಪರ ಅತ್ಯುತ್ತಮ ಫೀಲ್ಡರ್ ಎನಿಸಿಕೊಂಡಿರುವ ಜಡೇಜಾ, ಒತ್ತಡವನ್ನು ನಿಭಾಯಿಸುವಲ್ಲಿ ವೈಫಲ್ಯವನ್ನು ಅನುಭವಿಸಿದ್ದಾರೆ.

Comments are closed.