ಕ್ರೀಡೆ

ಚೆನ್ನೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಕೋಲ್ಕತ್ತಾ ! 6 ವಿಕೆಟ್ ಗಳ ಜಯ

Pinterest LinkedIn Tumblr

ಕೋಲ್ಕತ್ತಾ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 6 ವಿಕೆಟ್ ಗಳಿಂದ ಜಯಗಳಿಸಿದೆ.

ಗುರುವಾರ ರಾತ್ರಿ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ತಂಡದವರು ಚೆನ್ನೈ ಸೂಪರ್ ಕಿಂಗ್ಸ್ ಎದುರು ಆರು ವಿಕೆಟ್‌ಗಳಿಂದ ಗೆದ್ದರು.

178 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೆಕೆಆರ್‌ 17.4 ಓವರ್‌ಗಳಲ್ಲಿ ಜಯದ ನಗೆ ಸೂಸಿತು.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಪರವಾಗಿ ನಾಯಕ ಮಹೇಂದ್ರಸಿಂಗ್ ದೋನಿ (43; 25ಎ,1ಬೌಂ, 4ಸಿ) ಮತ್ತೆ ಮಿಂಚಿದರು.

ಶೇನ್ ವಾಟ್ಸನ್ (36; 25ಎ, 4ಬೌಂ, 2ಸಿ) ಮತ್ತು ಫಾಫ್ ಡು ಪ್ಲೆಸಿ (27; 15ಎ,4ಬೌಂ, 1ಸಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 48 ರನ್ ಗಳಿಸಿದರು.

ಡುಪ್ಲೆಸಿ ಔಟಾದ ನಂತರ ವಾಟ್ಸನ್‌ ಜೊತೆಗೂಡಿದ ಸುರೇಶ್ ರೈನಾ (31; 26ಎ, 4ಬೌಂ) ಕೂಡ ರನ್‌ ಗಳಿಸುವತ್ತ ಚಿತ್ತ ನೆಟ್ಟರು. ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಎಚ್ಚರಿಕೆಯಿಂದ ಆಡಿ ರನ್‌ ಗಳಿಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ 43 ರನ್‌ಗಳನ್ನು ಪೇರಿಸಿದರು.

ಸುನಿಲ್ ನಾರಾಯಣ್ ಎಸೆತದಲ್ಲಿ ವಾಟ್ಸನ್‌ ಔಟಾದರು. 12ನೇ ಓವರ್‌ನಲ್ಲಿ ಸುರೇಶ್ ರೈನಾ ಕೂಡ ಔಟಾದರು. ಕ್ರೀಸ್‌ನಲ್ಲಿದ್ದ ಅಂಬಟಿ ರಾಯುಡು (21;17ಎ,3ಬೌಂ) ಜೊತೆಗೂಡಿದ ದೋನಿ ಬೌಲರ್‌ಗಳಿಗೆ ಸವಾಲೊಡ್ಡಿದರು. ರಾಯುಡು ಜೊತೆಗೆ 4ನೇ ವಿಕೆಟ್‌ಗೆ ಅವರು 19 ರನ್ ಮತ್ತು ಜಡೇಜರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 52 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 177 (ಶೇನ್ ವಾಟ್ಸನ್‌ 36, ಫಾಫ್ ಡುಪ್ಲೆಸಿ 27, ಸುರೇಶ್ ರೈನಾ 31, ಅಂಬಟಿ ರಾಯುಡು 21, ಮಹೇಂದ್ರಸಿಂಗ್ ದೋನಿ 43, ರವೀಂದ್ರ ಜಡೇಜ 12, ಪಿಯೂಷ್ ಚಾವ್ಲಾ 35ಕ್ಕೆ2, ಸುನಿಲ್ ನಾರಾಯಣ್ 20ಕ್ಕೆ2, ಕುಲದೀಪ್ ಯಾದವ್ 34ಕ್ಕೆ1)

ಕೆಕೆಆರ್‌: 17.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 180 (ಸುನಿಲ್ ನಾರಾಯಣ್‌ 32, ಶುಭಮನ್ ಗಿಲ್ ಔಟಾಗದೆ 57, ದಿನೇಶ್ ಕಾರ್ತಿಕ್‌ ಔಟಾಗದೆ 45).

Comments are closed.