ಕ್ರೀಡೆ

ನಾಯಕನಾಗಿ ಹಲವು ದಾಖಲೆಗಳನ್ನು ಪುಡಿಗಟ್ಟಿದ ‘ಶ್ರೇಯಸ್ಸು’

Pinterest LinkedIn Tumblr

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಚ್ ಚಾಂಪಿಯನ್‌ಶಿಪ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ನ ಯುವ ನಾಯಕ ಶ್ರೇಯಸ್ ಅಯ್ಯರ್, ಅನೇಕ ದಾಖಲೆಗಳನ್ನು ಪುಡಿಗೈದಿದ್ದಾರೆ.

ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗೆ ಶ್ರೇಯಸ್ ಪಾತ್ರವಾಗಿದ್ದಾರೆ.

ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಕೇವಲ 40 ಎಸೆತಗಳಲ್ಲಿ 93 ರನ್ ಗಳಿಸಿ ಅಜೇಯರಾಗುಳಿದಿದ್ದರು.

ಶ್ರೇಯಸ್ ಸಿಡಿಲಬ್ಬರದ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು.

ಕೆಲವು ದಿನಗಳ ಹಿಂದೆಯಷ್ಟೇ ಗೌತಮ್ ಗಂಭೀರ್ ಅವರು ಬಿಟ್ಟುಕೊಟ್ಟ ನಾಯಕ ಸ್ಥಾನಕ್ಕೆ 23ರ ಹರೆಯದ ಶ್ರೇಯಸ್ ಆಯ್ಕೆಯಾಗಿದ್ದರು. ಈ ಮೂಲಕ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಸುರೇಶ್ ರೈನಾ ಬಳಿಕ ಐಪಿಎಲ್‌ನಲ್ಲಿ ನಾಯಕ ಸ್ಥಾನ ವಹಿಸಿದ ನಾಲ್ಕನೇ ಅತಿ ಕಿರಿಯ ಆಟಗಾರ ಎಂದೆನಿಸಿಕೊಂಡಿದ್ದರು.

ನಾಯಕನಾಗಿ ಡೆಬ್ಯು ಪಂದ್ಯದಲ್ಲೇ ಗರಿಷ್ಠ ರನ್:
ಶ್ರೇಯಸ್ ಅಯ್ಯರ್ (ಡೆಲ್ಲಿ ಡೇರ್ ಡೆವಿಲ್ಸ್): 65*, ವಿರುದ್ಧ: ಕೋಲ್ಕೊತಾ, 2018
ಆ್ಯರೋನ್ ಫಿಂಚ್ (ಪುಣೆ ವಾರಿಯರ್ಸ್): 64, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ, 2013
ಮುರಳಿ ವಿಜಯ್(ಕಿಂಗ್ಸ್ ಇಲೆವೆನ್ ಪಂಜಾಬ್): 55, ವಿರುದ್ಧ: ಗುಜರಾತ್ ಲಯನ್ಸ್, 2016
ಆ್ಯಡಂ ಗಿಲ್‌ಕ್ರಿಸ್ಟ್ (ಡೆಕ್ಕನ್ ಚಾರ್ಜರ್ಸ್): 54 ವಿರುದ್ಧ: ಚೆನ್ನೈ ಸೂಪರ್ ಕಿಂಗ್ಸ್, 2008

Comments are closed.