ಕ್ರೀಡೆ

ಕೊನೆಕ್ಷಣದಲ್ಲಿ ಹರಾಜಿನಲ್ಲಿ ಕ್ರಿಸ್ ಗೇಲ್’ರನ್ನು ಖರೀದಿಸಿದ ರಹಸ್ಯ ಬಿಚ್ಚಿಟ್ಟ ಕಿಂಗ್ಸ್ ಇಲೆವೆನ್ !

Pinterest LinkedIn Tumblr

ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರನ್ನು ಕೊನೆಕ್ಷಣದಲ್ಲಿ ಹರಾಜಿನಲ್ಲಿ ಖರೀದಿಸಿದ ರಹಸ್ಯ ಬಿಚ್ಚಿಟ್ಟಿದ್ದು, ಹಣದ ಕೊರತೆಯಿಂದ ಆರಂಭಿಕ ದಾಂಡಿಗನನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತುಎಂದು ತಂಡದ ಸಹ ಮಾಲೀಕ ನೆಸ್ ವಾಡಿಯಾ ಅವರು ಶುಕ್ರವಾರ ಹೇಳಿದ್ದಾರೆ.

ಸಿಕ್ಸರ್ ಕಿಂಗ್ ಕ್ರಿಸ್ ಗೇಲ್ ಗೆ ಹರಾಜಿನಲ್ಲಿ 2 ಕೋಟಿ ರುಪಾಯಿ ಮೂಲ ಬೆಲೆ ನಿಗದಿಪಡಿಸಲಾಗಿತ್ತು. ಆದರೂ ಅನಿರೀಕ್ಷತವಾಗಿ ಮರು ಹರಾಜಿನಲ್ಲೂ ಮಾರಾಟವಾಗಲಿಲ್ಲ.

ನಮ್ಮ ಬಳಿ ಕೇವಲ 2.1 ಕೋಟಿ ರುಪಾಯಿ ಮಾತ್ರ ಉಳಿದಿತ್ತು. ಒಂದು ವೇಳೆ ನಾವು ಮೂಲ ಬೆಲೆಗೆ ಕೂಗಿದರೆ ಮತ್ತೊಂದು ತಂಡ ಅದಕ್ಕೂ ಹೆಚ್ಚು ಬಿಡ್ ಮಾಡಿದರೆ ಏನು ಮಾಡುವುದು ಎಂಬ ಆತಂಕ ನಮ್ಮನ್ನು ಕಾಡಿತ್ತು. ಆದರೆ ಅದೃಷ್ಟವಶಾತ್ ಇತರೆ ಯಾವುದೇ ತಂಡ ಹೆಚ್ಚಿನ ಬಿಡ್ ಮಾಡಲಿಲ್ಲ. ಹೀಗಾಗಿ ನಾವು ಕ್ರಿಸ್ ಗೇಲ್ ಅವರನ್ನು ಮೂರನೇ ಬಾರಿ ತಂಡಕ್ಕೆ ಸೇರಿಸಿಕೊಳ್ಳಲು ಖುಷಿಯಾಯಿತು ಎಂದು ವಾಡಿಯಾ ಹೇಳಿದ್ದಾರೆ.

ಹರಾಜಿಗೂ ಮುನ್ನ ಕಿಂಗ್ಸ್ ಇಲೆವನ್ ಕೇವಲ ಅಕ್ಷರ್ ಪಟೇಲ್ ಒಬ್ಬರನ್ನೇ ಉಳಿಸಿಕೊಂಡಿತ್ತು. ಹರಾಜಿನಲ್ಲಿ ಇತರೆ ಎಲ್ಲಾ ಆಟಾಗರರನ್ನು ಖರೀದಿಸಿದ್ದು, ಕೊನೆ ಕ್ಷಣದಲ್ಲಿ ಗೇಲ್ ಅವರನ್ನು 2 ಕೋಟಿ ಖರೀದಿಸುವ ಮೂಲಕ ತನ್ನ ಬಳಿ ಇದ್ದ ಒಟ್ಟು 67.5 ಕೋಟಿ ರುಪಾಯಿಯಲ್ಲಿ 10 ರಕ್ಷ ರುಪಾಯಿ ಉಳಿಸಿಕೊಂಡಿದೆ.

ಮೂಲ ಬೆಲೆ 2 ಕೋಟಿ ನಿಗದಿಯಾಗಿದ್ದ ಕ್ರಿಸ್ ಗೇಲ್ ರನ್ನು ಬಿಡ್ಡಿಂಗ್ ನಲ್ಲಿ ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಿಟೆನ್ಶನ್ ಹಾಗೂ ರೈಟ್ ಟು ಮ್ಯಾಚ್ ಕಾರ್ಡ್‍ನಲ್ಲಿಯೂ ಗೇಲ್‍ರನ್ನು ಉಳಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಮನಸ್ಸು ಮಾಡಿರಲಿಲ್ಲ. ಆದರೆ 3ನೇ ಹಾಗೂ ಅಂತಿಮ ಬಾರಿ ಹರಾಜಿನಲ್ಲಿ ಮತ್ತೆ ಗೇಲ್ ಹೆಸರು ಬಂದಾಗ ಪ್ರೀತಿ ಜಿಂಟಾ ಮೂಲ ಬೆಲೆಗೆ ಗೇಲ್‍ರನ್ನು ತಂಡಕ್ಕೆ ಸೇರಿಸಿಕೊಂಡಿದ್ದರು.

Comments are closed.