ಕ್ರೀಡೆ

ಪಂದ್ಯ ಮುಗಿದ ಮಗಳ ಕೆಲಸಕ್ಕೆ ಹಾಜರಾದ ದೋನಿಯ ವಿಡಿಯೊ ವೈರಲ್‌

Pinterest LinkedIn Tumblr

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಎಂ.ಎಸ್‌.ದೋನಿ ಅವರು ತಂದೆಯ ಕೆಲಸಕ್ಕೆ ಹಾಜರಾಗುವ ಮೂಲಕ ಗಮನ ಸೆಳೆದಿದ್ದಾರೆ.

https://instagram.com/p/BiB3dqknOPG/?utm_source=ig_embed

ನಿದ್ದೆಯಿಂದ ಎದ್ದ ಮಗಳು ಝಿವಾಳ ತಲೆ ಕೂದಲನ್ನು ಹೇರ್‌ ಡ್ರೈಯರ್‌ನಲ್ಲಿ ಒಣಗಿಸುತ್ತಿರುವ ವಿಡಿಯೊವನ್ನು ದೋನಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ‘Game over, had a nice sleep now back to Daddy’s duties’ ಎಂದು ಬರೆದಿದ್ದಾರೆ.

ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈವರೆಗೆ 3 ಕೋಟಿ 43 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ 5 ವಿಕೆಟ್‌ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ದೋನಿ ಔಟಾಗದೆ 70 ರನ್‌(3ಬೌಂಡರಿ, 8 ಸಿಕ್ಸರ್) ಗಳಿಸಿದ್ದು, ಗೆಲುವಿನ ರೂವಾರಿ ಎನಿಸಿಕೊಂಡರು.

Comments are closed.