ಕ್ರೀಡೆ

ಹೈದರಾಬಾದ್ ಬೌಲರ್’ಗಳ ದಾಳಿಗೆ ಧೂಳಿಪಟವಾದ ಪಂಜಾಬ್ ! 13 ರನ್ ಗಳಿಂದ ಗೆಲುವು ದಾಖಲಿಸಿದ ಹೈದರಾಬಾದ್

Pinterest LinkedIn Tumblr

ಹೈದರಾಬಾದ್: ರಶೀದ್ ಖಾನ್‌ (19ಕ್ಕೆ3) ಮತ್ತು ಶಕೀಬ್‌ ಅಲ್‌ ಹಸನ್‌ (18ಕ್ಕೆ2) ಅವರ ಸ್ಪಿನ್‌ ದಾಳಿಗೆ ಗುರುವಾರ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಕಂಗೆಟ್ಟಿತು.

ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 13ರನ್‌ಗಳಿಂದ ಗೆದ್ದಿತು.

ಟಾಸ್ ಗೆದ್ದ ಪಂಜಾಬ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 132 ರನ್‌ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಕಿಂಗ್ಸ್‌ ಇಲೆವನ್‌ 19.2 ಓವರ್‌ಗಳಲ್ಲಿ 119ರನ್‌ಗಳಿಗೆ ಆಲೌಟ್‌ ಆಯಿತು.

ಅಂಕಿತ್ ರಜಪಪೂತ್‌ ಅವರು ತಮ್ಮ ಸ್ವಿಂಗ್ ದಾಳಿಯ ಮೂಲಕ ಸನ್‌ರೈಸರ್ಸ್‌ ಬಳಗವನ್ನು ಕಟ್ಟಿಹಾಕಿದರು. ಆರಂಭಿಕ ಆಟಗಾರ ಶಿಖರ್ ಧವನ್ (11 ರನ್), ಕೇನ್ ವಿಲಿ ಯಮ್ಸನ್ (00), ವೃದ್ಧಿಮಾನ್ ಸಹಾ (6), ಮನೀಷ್ ಪಾಂಡೆ (54 ರನ್) ಮತ್ತು ಮೊಹಮ್ಮದ್ ನಬಿ (4 ರನ್) ಅವರ ವಿಕೆಟ್‌ಗಳನ್ನು ಕಬಳಿಸಿದರು.

ಮನೀಷ್ ಪಾಂಡೆ (54; 51ಎ,3ಬೌಂ, 1ಸಿ) ಅವರು ತಂಡಕ್ಕೆ ಆಸರೆಯಾದರು. ಅವರು ಶಕೀಬ್ ಅಲ್ ಹಸನ್ ಅವರೊಂದಿಗೆ 5ನೇ ವಿಕೆಟ್ ಜೊತೆಯಾಟದಲ್ಲಿ 49 ರನ್‌ಗಳನ್ನು ಸೇರಿಸಿದರು. ಕೆ.ಎಲ್. ರಾಹುಲ್ (ಔಟಾಗದೆ 4) ಮತ್ತು ಕ್ರಿಸ್ ಗೇಲ್ (ಔಟಾಗದೆ 11 ) ಕ್ರೀಸ್‌ನಲ್ಲಿದ್ದರು.

ಸಂಕ್ಷಿಪ್ತ ಸ್ಕೋರು: ಸನ್‌ರೈಸರ್ಸ್‌ ಹೈದರಾಬಾದ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 132 (ಧವನ್ 11, ಮನೀಷ್ ಪಾಂಡೆ 54, ಶಕೀಬ್ 28, ಯೂಸುಫ್ ಪಠಾಣ್ 21, ಅಂಕಿತ್ ರಜಪೂತ್ 14ಕ್ಕೆ5, ಮುಜೀಬ್ ಉರ್ ರೆಹಮಾನ್ 17ಕ್ಕೆ1) ವಿವರ ಅಪೂರ್ಣ.

Comments are closed.