ರಾಷ್ಟ್ರೀಯ

ತಲೆಯ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ವೈದ್ಯರು ಮಾಡಿದ ಯಡವಟ್ಟೇನು..?

Pinterest LinkedIn Tumblr

ನವದೆಹಲಿ: ಸುಶೃತ ಟ್ರೌಮ ಸೆಂಟರ್ ನ ವೈದ್ಯರು ಯಡವಟ್ಟು ಮಾಡಿದ್ದು ತಲೆಗೆ ಪೆಟ್ಟುಬಿದ್ದಿದ್ದ ರೋಗಿಗೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಆಸ್ಪತ್ರೆಗೆ ಕಾಲಿನ ಸಮಸ್ಯೆ ಹಾಗೂ ತಲೆಗೆ ಗಾಯವಾದ ಒಂದೇ ರೀತಿಯ ಹೆಸರುಳ್ಳ ಇಬ್ಬರು ರೋಗಿಗಳು ದಾಖಲಾಗಿದ್ದರು. ವಿಜಯೇಂದ್ರ ಎಂಬ ರೋಗಿಗೆ ತಲೆಗೆ ಗಾಯವಾಗಿದ್ದರೆ ವೀರೇಂದ್ರ ಎಂಬ ರೋಗಿಗೆ ಕಾಲು ಮುರಿದಿತ್ತು. ಹೆಸರನ್ನು ಗೊಂದಲ ಮಾಡಿಕೊಂಡ ವೈದ್ಯರು ತಲೆಗೆ ಗಾಯವಾಗಿದ್ದ ವಿಜಯೇಂದ್ರ ಎಂಬ ರೋಗಿಗೆ ಕಾಲಿನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ದೆಹಲಿ ಮೆಡಿಕಲ್ ಕೌನ್ಸಿಲ್ ಈ ಪ್ರಕರಣವನ್ನು ಗಂಭೀರವಾಗಿ ಪರಿಣಗಿಸಿದ್ದು, 10 ದಿನಗಳಲ್ಲಿ ಉತ್ತರ ನೀಡುವಂತೆ ಆಸ್ಪತ್ರೆಗೆ ಸೂಚಿಸಿದೆ. ಏ.19 ರಂದು ಈ ಘಟನೆ ನಡೆದಿದೆ.

ತಪ್ಪು ತಿಳಿಯುತ್ತಿದ್ದಂತೆಯೇ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯನಿಗೆ ಇನ್ನು ಯಾವುದೇ ಶಸ್ತ್ರಚಿಕಿತ್ಸೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ.

Comments are closed.