ಕ್ರೀಡೆ

ಮುಂಬೈ ವಿರುದ್ಧ ಡೆಲ್ಲಿಗೆ ಚೊಚ್ಚಲ ಗೆಲುವು; ಮುಂಬೈಗೆ ಹ್ಯಾಟ್ರಿಕ್ ಸೋಲು..!

Pinterest LinkedIn Tumblr

ಮುಂಬೈ: ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್‌ ಕ್ರಿಕೆಟ್‌ ಟೂರ್ನಿಯ ಒಂಬತ್ತನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ಡೆಲ್ಲಿ ಡೇರ್‌ ಡೆವಿಲ್ಸ್‌ ಏಳು ವಿಕೆಟ್‌ ಜಯ ಸಾಧಿಸಿದೆ.

ಮೊದಲೆರಡು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದ ಡೆಲ್ಲಿ ಡೇರ್’ಡೆವಿಲ್ಸ್ ಕೊನೆಗೂ ಜಯದ ನಗೆ ಬೀರಿದೆ. ಇನ್ನು ಹಾಲಿ ಚಾಂಪಿಯನ್ ಆಡಿದ ಮೂರು ಪಂದ್ಯಗಳಲ್ಲೂ ನಿರಾಸೆ ಅನುಭವಿಸುವುದರೊಂದಿಗೆ ಹ್ಯಾಟ್ರಿಕ್ ಸೋಲು ಕಂಡಿದೆ.

ಮುಂಬೈ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಡೆಲ್ಲಿ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ನಾಯಕ ಜೇಸನ್ ರಾಯ್ ಹಾಗೂ ನಾಯಕ ಗೌತಮ್ ಗಂಭೀರ್ ಜೋಡಿ 50 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿತು. ಗಂಭೀರ್ 15 ರನ್ ಬಾರಿಸಿ ಮುಸ್ತಾಫಿಜುರ್ ಬೌಲಿಂಗ್’ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಎರಡನೇ ವಿಕೆಟ್’ಗೆ ಜೇಸನ್ ರಾಯ್-ರಿಶಭ್ ಪಂತ್ 69 ರನ್ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಪಂತ್ ಕೇವಲ 25 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 47 ರನ್ ಸಿಡಿಸಿ ಕೃನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಮ್ಯಾಕ್ಸ್’ವೆಲ್ ಕೂಡಾ 16 ರನ್ ಬಾರಿಸಿ ಕೃನಾಲ್’ಗೆ ವಿಕೆಟ್ ಒಪ್ಪಿಸಿದರು.

ಒಂದು ಕಡೆ ಮೂರು ವಿಕೆಟ್ ಉರುಳಿದರೂ ಮತ್ತೊಂದೆಡೆ ನಿರಾತಂಕವಾಗಿ ಬ್ಯಾಟ್’ಬೀಸಿದ ಜೇಸನ್ ರಾಯ್ 53 ಎಸೆತಗಳಲ್ಲಿ ತಲಾ 6 ಬೌಂಡರಿ ಹಾಗೂ ಸಿಕ್ಸರ್’ಗಳ ನೆರವಿನಿಂದ 91 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಶ್ರೇಯಸ್ ಅಯ್ಯರ್(27) ಸರಿಯಾದ ಸಾಥ್ ನೀಡಿದರು.

ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ 194 ರನ್ ಕಲೆಹಾಕಿತ್ತು.

ಸಂಕ್ಷಿಪ್ತ ಸ್ಕೋರ್:

ಮುಂಬೈ ಇಂಡಿಯನ್ಸ್: 194

ಸೂರ್ಯಕುಮಾರ್ ಯಾದವ್: 53

ಡೇನಿಯಲ್ ಕ್ರಿಸ್ಟಿಯನ್: 35/2

ಡೆಲ್ಲಿ ಡೇರ್ ಡೆವಿಲ್ಸ್: 195/3

ಜೇಸನ್ ರಾಯ್: 91*

ಕೃನಾಲ್ ಪಾಂಡ್ಯ: 21/2

Comments are closed.