ಕ್ರೀಡೆ

ಐಪಿಎಲ್ 2018ರ ಮೊದಲ ಪಂದ್ಯದಲ್ಲಿಯೇ ಗುಡುಗಿದ ಬ್ರಾವೋ ! ಮುಂಬಯಿ ವಿರುದ್ಧ ಚೆನ್ನೈಗೆ 1 ವಿಕೆಟ್ ಗಳ ರೋಚಕ ಜಯ

Pinterest LinkedIn Tumblr

ಮುಂಬೈ: 2018ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಒಂದು ವಿಕೆಟ್ ಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿದೆ.

ಡ್ವೇನ್ ಬ್ರಾವೋ ಬಿರುಸಿನ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಜಯಿಸಿದೆ.

ಮುಂಬೈ ನೀಡಿದ್ದ 165ರನ್ ಗುರಿ ಬೆನ್ನತ್ತಿದ ಚೆನ್ನೈಗೆ ಪ್ರಾರಂಭಿಕ ಆಘಾತ ಎದುರಾಗಿತ್ತು. ಅಲ್ಲದೆ ಹತ್ತು ಓವರ್ ಮುಗಿವ ವೇಳೆಗೆ ನಾಯಕ ಮಹೇಂದ್ರ ಸಿಂಗ್ ಧೋನಿ (5) ಸೇರಿದಂತೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಚೆನ್ನೈ 56 ರನ್ ಗಳಿಸಿತ್ತು.

ಇದಾದ ಬಳಿಕ ಸಹ ಕೇದರ್ ಬಾಧವ್ (14) ರವೀಂದ್ರ ಜಡೇಜಾ (12) ದೀಪಕ್ ಚಹರ್ (೦) ಹರಭಜನ್ ಸಿಂಗ್ (8) ಒಬ್ಬರಾದ ಮೇಲೊಬ್ಬರು ಪೆವಿಲಿಯನ್ ಸೇರಿದ್ದರು. ಹೀಗೆ ಹದಿನೈದನೇ ಓವರ್ ವೇಳೆಗೆ ಚೆನ್ನೈ ಗೆಲ್ಲಲು 60 ರನ್ ಅಗತ್ಯವಿತ್ತು.

ಆದರೆ ಕಣಕ್ಕಿಳಿದಾಗಿನಿಂದ ಉತ್ತಮ ಪ್ರದರ್ಶನ ನಿಡುತ್ತಾ ಬಂದಿದ್ದ ಬ್ರಾವೋ 30 ಎಸೆತಗಳಲ್ಲಿ 68 ರನ್ ಗಳಿಸಿ ತಂಡಕ್ಕೆ ಉತ್ತೇಜನ ನೀಡಿದ್ದರು.ಇವರು ಕೇವಲ 25 ಎಸೆತಗಳಲ್ಲಿ ಐವತ್ತು ರನ್ ಕಲೆಹಾಕಿದ್ದರು. ಆದರೆ 19ನೇ ಓವರ್‌ ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ದಾಳಿಗೆ ಬಲಿಯಾಗಿ ಕಣದಿಂಡ ಹೊರನಡೆಯಬೇಕಾಯಿತು.

ಕಡೆಯ ಓವರ್ ವೇಳೆಗೆ ಚೆನ್ನೈ ಗೆಲ್ಲಲು 7 ರನ್ ಅಗತ್ಯವಿದ್ದು ಒಂದೇ ವಿಕೆಟ್ ಉಳಿದುಕೊಂಡಿತ್ತು. ಅಂತಿಮವಾಗಿ ಕ್ರೀಸಿಗಿಳಿದಿದ್ದ ಕೇದರ್ ಜಾಧವ್ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಒತ್ಟಾರೆ 166ಚೆನ್ನೈ 19.5 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169ರನ್ ಗಳಿಸಿ ಗೆಲುವಿನ ದಡ ಮುಟ್ಟಿತು.

ಮುಂಬಯಿ ಪರ ಪಾಂಡ್ಯ ಹಾಗೂ ಮಾರ್ಕಂಡೆ ತಲಾ 3 ವಿಕೆಟ್ ಕಬಳಿಸಿದ್ದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಇಂಡಿಯನ್ಸ್ 165/4 (20.0)
ಚೆನ್ನೈ ಸೂಪರ್ ಕಿಂಗ್ಸ್ 169/9 (19.5)

Comments are closed.