ಕ್ರೀಡೆ

ಕಾಶ್ಮೀರದಲ್ಲಿ ಮುಗ್ಧರ ಹತ್ಯೆ ನಡೆಯುತ್ತಿದೆ ಎಂದ ಆಫ್ರಿದಿಗೆ ಗಂಭೀರ್ ಕೊಟ್ಟ ತಿರುಗೇಟು ಏನು…?

Pinterest LinkedIn Tumblr

ನವದೆಹಲಿ: ಕಾಶ್ಮೀರದಲ್ಲಿ ಮುಗ್ಧರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್‌ ಆಫ್ರಿದಿ ಆರೋಪಿಸಿದ್ದು, ಇದಕ್ಕೆ ಕ್ರಿಕೆಟಿಗ ಗೌತಮ್ ಗಂಭೀರ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಆಫ್ರಿದಿ ಅವರನ್ನು ‘ಅಂಡರ್‌ ನೈಂಟೀನ್ (19 ವರ್ಷ ವಯೋಮಾನದ ಒಳಗಿನವರು)’ ಎಂದು ಗಂಭೀರ್ ವ್ಯಂಗ್ಯವಾಡಿದ್ದಾರೆ.

‘ಕಾಶ್ಮೀರ ಮತ್ತು ವಿಶ್ವಸಂಸ್ಥೆ ಬಗ್ಗೆ ಆಫ್ರಿದಿ ಅವರ ಟ್ವೀಟ್ ಬಗ್ಗೆ ಮಾಧ್ಯಮಗಳು ನನ್ನಲ್ಲಿ ಪ್ರತಿಕ್ರಿಯೆ ಕೇಳಿದವು. ಅದರಲ್ಲಿ ಹೇಳುವುದೇನಿದೆ? ಆಫ್ರಿದಿ ಅವರು ವಿಶ್ವಸಂಸ್ಥೆಯನ್ನು ಎದುರುನೋಡುತ್ತಿದ್ದಾರೆ. ಇದು ಅವರ ಅಂಡರ್‌ ನೈಂಟೀನ್ ವಯಸ್ಸಿನ ಯೋಚನೆ. ಮಾಧ್ಯಮಗಳು ನಿರಾಳರಾಗಬಹುದು. ನೋಬಾಲ್ ಮನವಿ ತಿರಸ್ಕರಿಸಿದ್ದನ್ನು ಶಾಹೀದ್ ಆಫ್ರಿದಿ ಸಂಭ್ರಮಿಸುತ್ತಿದ್ದಾರೆ!!!’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಆಫ್ರಿದಿ ಟ್ವೀಟಲ್ಲೇನಿದೆ?: ‘ಭಾರತ ಆಕ್ರಮಿತ ಕಾಶ್ಮೀರದಲ್ಲಿ ನೋಡಲಾಗದ ಮತ್ತು ಬೇಸರದ ಸನ್ನಿವೇಶ ಮುಂದುವರಿಯುತ್ತಿದೆ. ಸ್ವಯಂ ನಿರ್ಣಯ ಮತ್ತು ಸ್ವಾತಂತ್ರ್ಯದ ಕೂಗನ್ನು ಹತ್ತಿಕ್ಕಲು ಮುಗ್ಧರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ. ವಿಶ್ವಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಎಲ್ಲಿವೆ ಎಂಬ ಬಗ್ಗೆ ಅಚ್ಚರಿಯಾಗುತ್ತಿದೆ. ರಕ್ತಪಾತವನ್ನು ನಿಲ್ಲಿಸಲು ಅವು ಯಾಕೆ ಪ್ರಯತ್ನಿಸುತ್ತಿಲ್ಲ?’ ಎಂದು ಶಾಹೀದ್ ಆಫ್ರಿದಿ ಟ್ವೀಟ್ ಮಾಡಿದ್ದರು.

Comments are closed.