ಕರ್ನಾಟಕ

ಅನಿಲ್ ಕುಂಬ್ಳೆ ಪತ್ನಿ ಪಾನ್ ಕಾರ್ಡ್ ದುರ್ಬಳಕೆ

Pinterest LinkedIn Tumblr


ಬೆಂಗಳೂರು: ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪತ್ನಿ ಚೇತನಾ ಅವರ ಪಾನ್‌ಕಾರ್ಡ್‌ನ್ನುದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಟೈಮ್‌ಕೀಪರ್ಸ್ ದಿ ವಾಚ್ ಪ್ರೈ.ಲಿ ಕಂಪನಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಟೈಮ್ ಕೀಪರ್ಸ್ ದಿ ವಾಚ್ ಬಾಟಿಕ್ ಪ್ರೈ.ಲಿ ಕಂಪನಿ ಮತ್ತು ಯುಬಿಸಿಟಿಯಲ್ಲಿರುವ ಜಿಮ್ಸೋನ್‌ಸ್ ವಾಚಸ್ ಕಂಪನಿ ಸಿಬ್ಬಂದಿ ಸತ್ಯವಾಗೀಶ್ವರನ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ಚೇತನಾ ಜು.2016ರಂದು ಯುಬಿ ಸಿಟಿಯಲ್ಲಿರುವ ಜಿಮ್ಸೋನ್‌ಸ್ ವಾಚಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸತ್ಯವಾಗೀಶ್ವರನ್ ಅವರನ್ನು ಸಂಪರ್ಕಿಸಿ, ಫ್ರಾಂಕ್ ಮುಲ್ಲರ್ ವಾಚ್ ಖರೀದಿಸುವುದಾಗಿ ತಿಳಿಸಿದ್ದರು. ಆ ವಾಚ್ ನಮ್ಮ ಕಂಪನಿಯಲ್ಲಿ ಲಭ್ಯವಿಲ್ಲ. ಮುಂಬೈನಲ್ಲಿರುವ ಕೀಪರ್ಸ್ ದಿ ವಾಚ್ ಬಾಟಿಕ್ ಪ್ರೈಲಿ. ಕಂಪನಿಯಲ್ಲಿ ದೊರಕುತ್ತದೆ. ಆ ಕಂಪನಿಯಿಂದ ವಾಚ್ ತರಿಸುವುದಾಗಿ ತಿಳಿಸಿದ್ದರು.

ಒಂದು ವಾರದ ಬಳಿಕ 8 ಲಕ್ಷ ರು. ಮೌಲ್ಯದ ಪ್ರಾಂಕ್ ಮುಲ್ಲರ್ ವಾಚ್‌ನ್ನು ಮುಂಬೈನಿಂದ ತರಿಸಿ ಚೇತನಾ ಅವರಿಗೆ ತೋರಿಸಿದ್ದರು. ಇದನ್ನು ಖರೀದಿ ಮಾಡುವುದಾಗಿ ತಿಳಿಸಿ ಸತ್ಯ ವಾಗೀಶ್ವರನ್ ಮೂಲಕ 8 ಲಕ್ಷ ರು. ಚೆಕ್‌ನ್ನುಟೈಮ್ ಕೀಪರ್ಸ್ ದಿ ವಾಚ್ ಬಾಟಿಕ್ ಪ್ರೈ ಲಿ.ಗೆ ಸಂದಾಯ ಮಾಡಿದ್ದರು. ಈ ವೇಳೆ ವಾಚ್ ಚೇತನಾರ ಪಾನ್‌ಕಾರ್ಡ್ ನಂಬರ್ ನೀಡುವಂತೆ ತಿಳಿಸಿತ್ತು. ಅದರಂತೆ ಚೇತನಾ ಪಾನ್ ಕಾರ್ಡ್ ನಂಬರ್ ವಾಚ್ ಖರೀದಿ ಮಾಡಿದ ಕಂಪನಿ ಮತ್ತು ಸತ್ಯವಾಗೀಶ್ವರ್‌ಗೆ ತಿಳಿಸಿದ್ದರು.

Comments are closed.