ಕ್ರೀಡೆ

ಚೆಂಡು ವಿರೂಪಗೊಳಿಸುತ್ತಿದ್ದ ದೃಶ್ಯವನ್ನು ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ !

Pinterest LinkedIn Tumblr

ಕೇಪ್‍ಟೌನ್: ಆಸೀಸ್ ಆಟಗಾರರ ಬ್ಯಾನ್ ಕ್ರಾಪ್ಟ್ ಚೆಂಡು ವಿರೂಪಗೊಳಿಸುತ್ತಿದ್ದ ದೃಶ್ಯಗಳನ್ನು ಸೆರೆ ಹಿಡಿದ ಕ್ಯಾಮೆರಾಮೆನ್ ಗೆ ಪ್ರಶಂಸೆಯ ಸುರಿಮಳೆ ವ್ಯಕ್ತವಾಗಿದೆ.

ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂದು ಆಸ್ಟ್ರೇಲಿಯಾ ಆಟಗಾರ ಬ್ರಾಕ್ ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ ದೃಶ್ಯಗಳನ್ನು ಜೋಟಾನಿ ಅಸ್ಕರ್ ತನ್ನ ಕ್ಯಾಮರಾ ಮೂಲಕ ಸೆರೆ ಹಿಡಿದಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಸ್ಕರ್, ತಾನು ತನ್ನ ಕೆಲಸವನ್ನು ಅಷ್ಟೇ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಘಟನೆ ಕುರಿತು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ ದಕ್ಷಿಣ ಆಫ್ರಿಕಾದ ವಿಕ್ಷಣಾ ವಿವರಣೆಗಾರ ನೀಲ್ ಮ್ಯಾಂಥಾರ್ಪ್ ಪಂದ್ಯದ ವೇಳೆ ಆಟಗಾರರ ವರ್ತನೆ ಅನುಮಾನಸ್ಪದವಾಗಿ ಕಂಡು ಬಂದಿತ್ತು. ಈ ಕೃತ್ಯವನ್ನು ಬಯಲಿಗೆ ತಂದ ಶ್ರೇಯಸ್ಸು ಕ್ಯಾಮೆರಾಮೆನ್ ಗೆ ಸಲ್ಲುತ್ತದೆ. ಅನುಚಿತ ಘಟನೆ ನಡೆಯುವ ಕುರಿತು ಅವರು ಗ್ರಹಿಸಿದ್ದರು ಎಂದು ಹೇಳಿ ಶ್ಲಾಘಿಸಿದ್ದಾರೆ.

ಘಟನೆಯನ್ನು ಮೈದಾನದ ಸ್ಟ್ಯಾಂಡ್ ನಲ್ಲಿ ಕುಳಿತು ಗ್ರಹಿಸಲು ಸಾಧ್ಯವಿಲ್ಲ. ಅಲ್ಲದೇ ಸಮಾನ್ಯ ಟೆಲಿವಿಷನ್‍ಗಳಲ್ಲೂ ಇದನ್ನು ಗಮನಿಸಲು ಸಾಧ್ಯವಿಲ್ಲ. ಕ್ಯಾಮರಾ ಮೆನ್ ಗಳು ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಸರಿಯಾದ ಸಮಯದಲ್ಲಿ ದೃಶ್ಯಗಳನ್ನು ಸೆರೆ ಹಿಡಿಯುವ ಕೌಶಲ್ಯವನ್ನು ಹೊಂದಿದ್ದರಿಂದ ಪ್ರಕರಣ ಬಯಲಾಗಿದೆ ಎಂದರು. ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ನಾಯಕತ್ವ ಸ್ಥಾನದಿಂದ ಸ್ಮಿತ್ ಔಟ್ – ರಹಾನೆಗೆ ಪಟ್ಟ

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾನ್ ಕ್ರಾಫ್ಟ್ ಹಾಗೂ ನಾಯಕ ಸ್ಮಿತ್ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದರು. ಸದ್ಯ ಅಸೀಸ್ ನಾಯಕ ಸ್ಮಿತ್, ಉಪನಾಯಕ ವಾರ್ನರ್ ಒಂದು ವರ್ಷದ ನಿಷೇಧಕ್ಕೆ ಒಳಪಡುವ ಸಾಧ್ಯತೆಗಳಿವೆ.

Comments are closed.