ಕ್ರೀಡೆ

ಲಂಡನ್‌ ಉದ್ಯಮಿ ಶಮಿಗೆ ಹುಡುಗಿಯರನ್ನು ಪರಿಚಯಿಸುತ್ತಿದ್ದ: ಪತ್ನಿ

Pinterest LinkedIn Tumblr


ಹೊಸದಿಲ್ಲಿ : ಕ್ರಿಕೆಟರ್‌ ಮೊಹಮ್ಮದ್‌ ಶಮಿ ವಿರುದ್ಧ ಹೊಸ ಹೊಸ ಆರೋಪ ಮಾಡುವುದನ್ನು ಮುಂದುವರಿಸಿರುವ ಆತನ ಪತ್ನಿ ಹಸೀನ್‌ ಜಹಾನ್‌, ಇದೀಗ ಹೊಸ ಆರೋಪದಲ್ಲಿ ‘ಲಂಡನ್‌ ಉದ್ಯಮಿ ಮೊಹಮ್ಮದ್‌ ಭಾಯಿ, ನನ್ನ ಪತಿ ಶಮಿಗೆ ಹುಡುಗಿಯರನ್ನು ಪರಿಚಯಿಸುತ್ತಿದ್ದ; ಹಾಗೆ ಪರಿಚಯಿಸಲ್ಪಟ್ಟವರಲ್ಲಿ ಮಂಜು ಮಿಶ್ರಾ ಎಂಬಾಕೆಯೂ ಒಬ್ಬಳು; ಆಕೆಯ ಜತೆಗೆ ಶಮಿಗೆ ಅನೈತಿಕ ಸಂಬಂಧವಿದೆ’ ಎಂದು ಬಾಂಬ್‌ ಸಿಡಿಸಿದ್ದಾಳೆ.

ಲಂಡನ್‌ ಉದ್ಯಮಿ ಮೊಹಮ್ಮದ್‌ ಭಾಯಿಯಿಂದ ಪರಿಚಯಿಸಲ್ಪಟ್ಟಿದ್ದ ಪಾಕ್‌ ಹುಡುಗಿ ಅಲಿಷ್‌ಬಾ ಳಿಂದ ಶಮಿ ಹಣ ತೆಗೆದುಕೊಂಡಿದ್ದ ಎಂದು ಪತ್ನಿ ಹಸೀನ್‌ ಜಹಾನ್‌ ಈ ಹಿಂದೆ ಆರೋಪಿಸಿದ್ದಳು.

ಹಸೀನ್‌ ಜಹಾನ್‌ ಮಾಡಿರುವ ಎಲ್ಲ ಆರೋಪಗಳನ್ನು ಅಲ್ಲಗಳೆದಿರುವ ಲಂಡನ್‌ ಉದ್ಯಮಿ ಮೊಹಮ್ಮದ್‌ ಭಾಯಿ, ಶಮಿಯೊಂದಿಗೆ ತಾನು ಅನ್ಯೋನ್ಯನಾಗಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದರು

ಶಮಿ ವಿರುದ್ಧ ಆತನ ಪತ್ನಿ ಹಸೀನ್‌ ಜಹಾನ್‌ ಅನೇಕ ಬಗೆಯ ಆರೋಪಗಳನ್ನು ಈ ಹಿಂದೆ ಮಾಡಿದ್ದು ಅವುಗಳಲ್ಲಿ ವಿವಾಹೇತರ ಸಂಬಂಧ, ಮ್ಯಾಚ್‌ ಫಿಕ್ಸಿಂಗ್‌, ಕೊಲೆ ಯತ್ನ ಮುಖ್ಯವಾಗಿವೆ.

“ಪರಸ್ಪರರ ವಿರುದ್ಧ ನಮ್ಮ ಹೋರಾಟವು ಈಗ ರಾಜಿಗೆ ಅವಕಾಶ ಇಲ್ಲದ ಹಂತವನ್ನು ತಲುಪಿದೆ. ನಾನು ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ಒಂದೊಮ್ಮೆ ನಾನು ನನ್ನ ಹೋರಾಟ ಕೈಬಿಟ್ಟರೆ ನನ್ನಂತಹ ಮಹಿಳೆಯರ ಸಮುದಾಯಕ್ಕೆ ಮುಖವೇ ಇಲ್ಲವಾಗಿ ಬಿಡುತ್ತದೆ. ಹಾಗಿರುವಾಗ ನಾನ್ಯಾಕೆ ನನ್ನ ಹೋರಾಟವನ್ನು ಕೈಬಿಡಲಿ ? ನನ್ನ ಬಳಿ ಎಲ್ಲ ಸಾಕ್ಷ್ಯಗಳಿವೆ; ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿರುವ ಹಸೀನ್‌ ಜಹಾನ್‌ ತನಗೆ ಪೊಲೀಸ್‌ ರಕ್ಷಣೆಯನ್ನೂ ಕೋರಿದ್ದಾಳೆ.

ಈ ನಡುವೆ ಪಾಕ್‌ ಹುಡುಗಿ ಅಲಿಷ್‌ಬಾ ತಾನು ದುಬೈನಲ್ಲಿ ಶಮಿಯನ್ನು ಭೇಟಯಾಗಿದ್ದುದನ್ನು ದೃಢೀಕರಿಸಿದ್ದಾಳೆ. ಆದರೆ ಆತನಿಗೆ ಹಣ ಕೊಟ್ಟಿರುವುದನ್ನು ಅಲ್ಲಗಳೆದಿದ್ದಾಳೆ.

-ಉದಯವಾಣಿ

Comments are closed.