ಕ್ರೀಡೆ

ಪುಂಗಿ ಊದಿದ ಲಂಕನ್ ಆಟಗಾರರು…ಬಾಂಗ್ಲಾದಿಂದ ನಾಗಿಣಿ ಡ್ಯಾನ್ಸ್!

Pinterest LinkedIn Tumblr

ಹೊಸದಿಲ್ಲಿ: ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಣ ನಿರ್ಣಾಯಕ ಪಂದ್ಯದಲ್ಲಿ ಭಾರಿ ವಾಗ್ವಾದಕ್ಕೊಳಗಾಗಿತ್ತು.

ಸಭ್ಯರ ಆಟ ಕ್ರಿಕೆಟ್ ಎಂಬುದನ್ನು ಮರೆದಿದ್ದ ಇತ್ತಂಡಗಳ ಆಟಗಾರರು ಪರಸ್ಪರ ಹಲ್ಲೆ ನಡೆಸುವ ಹಂತಕ್ಕೂ ಬಂದು ತಲುಪಿರುವುದು ಹೆಚ್ಚಿನ ವಿವಾದಕ್ಕೆಡೆ ಮಾಡಿದೆ.

ಏನಿದು ಘಟನೆ?

ಶ್ರೀಲಂಕಾ ವೇಗಿ ಇಸುರು ಉದಾನ ಎಸೆದ ಅಂತಿಮ ಓವರ್‌ನಲ್ಲಿ ಬಾಂಗ್ಲಾ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಮೊಹಮುದುಲ್ಲಾ ಹಾಗೂ ಮುಸ್ತಾಫಿಜುರ್ ರೆಹಮಾನ್ ಕ್ರೀಸಿನಲ್ಲಿದ್ದರು.

ಬಾಂಗ್ಲಾದೇಶದವರು ಎಲ್ಲಿ ಹೋದರೂ ತಮ್ಮ ಕಚಡಾ ಬುದ್ಧಿ ತೋರಿಸದೆ ಬಿಡುವುದಿಲ್ಲ. ಫೈನಲ್ ನಲ್ಲಿ ಭಾರತ ತಂಡ ಇವರ ಚಡ್ಡಿ ಬೀಳಿಸಿ ಹೊಡೆಯುತ್ತಾರೆ.

ಮೊದಲೆರಡು ಎಸೆತಗಳನ್ನು ಶಾರ್ಟ್ ಪಿಚ್ ಎಸೆದ ಉದಾನ, ಬ್ಯಾಟ್ಸ್‌ಮನ್ ಮುಸ್ತಾಫಿಜುರ್‌ಗೆ ರನ್ ಬಿಟ್ಟು ಕೊಡಲಿಲ್ಲ. ಅಲ್ಲದೆ ಎರಡನೇ ಎಸೆತದಲ್ಲಿ ರನ್ ಕಬಲಿಸಲು ಯತ್ನಿಸಿದ ಮುಸ್ತಾಫಿಜುರ್ ರನೌಟ್ ಆಗಿದ್ದರು.

ಆದರೆ ಸತತ ಎರಡು ಶಾರ್ಟ್ ಪಿಚ್ ಎಸೆತಗಳನ್ನು ಎಸೆದರೂ ಅಂಪೈರ್ ನೋ ಬಾಲ್ ನೀಡದಿರುವುದು ಬ್ಯಾಟ್ಸ್‌ಮನ್ ಮೊಹಮುದುಲ್ಲಾ ಆಕ್ರೋಶಕ್ಕೆ ಕಾರಣವಾಗಿತ್ತು.

ತಕ್ಷಣವೇ ಮೈದಾನಕ್ಕೆ ಡ್ರಿಂಕ್ಸ್ ತೆಗೆದುಕೊಂಡು ಬಂದ ಬಾಂಗ್ಲಾ ಮೀಸಲು ಆಟಗಾರ ನುರುಲ್ ಹಸನ್, ಏಕಾಏಕಿ ‘ಗಲ್ಲಿ’ ಕ್ರಿಕೆಟ್ ತರಹನೇ ಲಂಕಾ ನಾಯಕ ತಿಸರಾ ಪರೇರಾ ಮೇಲೆ ಹರಿಹಾಯ್ದರು. ಇದರಿಂದಾಗಿ ಇತ್ತಂಡಗಳ ಆಟಗಾರರ ನಡುವೆ ಸ್ವಲ್ಪ ಹೊತ್ತು ವಾಗ್ವಾದ ಉಂಟಾಗಿತ್ತು.

ಅತ್ತ ಬೌಂಡರಿ ಗೆರೆಯತ್ತ ಬಂದ ಬಾಂಗ್ಲಾ ನಾಯಕ ಶಕಿಬ್ ಅಲ್ ಹಸನ್ ಬ್ಯಾಟಿಂಗ್ ಮುಂದುವರಿಸದಂತೆ ಬ್ಯಾಟ್ಸ್‌ಮನ್‌ಗಳಿಗೆ ಸೂಚನೆ ನೀಡಿದ್ದರಲ್ಲದೆ ಮೊಹಮುದುಲ್ಲಾ ಹಾಗೂ ಮುಸ್ತಾಫಿಜುರ್ ಅವರನ್ನು ಪಂದ್ಯ ಮೊಟಕುಗೊಳಿಸಿ ಹಿಂದಕ್ಕೆ ಕರೆಯಿಸುವ ಯತ್ನ ಮಾಡಿದರು.

ಕೊನೆಗೂ ಪಂದ್ಯ ಮುಂದುವರಿಸಲು ಮೊಹಮ್ಮುದುಲ್ಲಾ ಹಾಗೂ ರುಬೆಲ್ ಹುಸೇನ್ ಸಮ್ಮತಿಸಿದರು. ಅಲ್ಲದೆ ಬಳಿಕದ ಮೂರು ಎಸೆತಗಳಲ್ಲಿ ಬೌಂಡರಿ, ಎರಡು ರನ್ ಹಾಗೂ ಭರ್ಜರಿ ಸಿಕ್ಸರ್ ಬಾರಿಸಿದ ಮೊಹಮ್ಮುದುಲ್ಲಾ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾಗಿದ್ದರು.

ಈ ನಡುವೆ ಪಂದ್ಯ ಮುಗಿದ ಕೆಲವೇ ಹೊತ್ತಿನಲ್ಲಿ ಬಾಂಗ್ಲಾದೇಶ ಡ್ರೆಸ್ಸಿಂಗ್ ಕೊಠಡಿ ಛಿದ್ರವಾಗಿದೆ. ಬಳಿಕ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಿರುವ ಪಂದ್ಯ ರೆಫರಿ ಕ್ರಿಸ್ ಬ್ರಾಡ್, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಪುಂಗಿ ಊದಿದ ಲಂಕನ್ ಆಟಗಾರರು…ಬಾಂಗ್ಲಾದಿಂದ ನಾಗಿಣಿ ಡ್ಯಾನ್ಸ್…
ಸರಣಿಯ ಮೊದಲ ಪಂದ್ಯದಲ್ಲಿ ಲಂಕಾ ವಿರುದ್ಧ ಗೆಲುವು ದಾಖಲಿಸಿದ ಸಂಭ್ರಮದಲ್ಲಿ ಬಾಂಗ್ಲಾದೇಶದ ಮುಶ್ಪಿಕರ್ ರಹೀಂ ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದರು.

ಇದೀಗ ಸೆಮಿಫೈನಲ್ ಮಹತ್ವ ಪಡೆದ ಪಂದ್ಯದಲ್ಲೂ ಇದರ ಬಿಸಿ ಬಿಸಿ ಕ್ಷಣಗಳು ಮುಂದುವರಿದಿತ್ತು. ಮುಶ್ಪಿಕರ್ ರಹೀಂ ವಿಕೆಟ್ ಪಡೆದ ತಕ್ಷಣ ಲಂಕಾ ಸ್ಪಿನ್ನರ್ ಅಮಿಲಾ ಅಮೊನ್ಸೊ ಹಾವನ್ನು ಹಿಡಿಯುವ ರೀತಿಯಲ್ಲಿ ಪುಂಗಿಯನ್ನು ಊದುವ ಸನ್ನೆ ಮಾಡಿದ್ದರು.

ಪಂದ್ಯವು ರೋಚಕ ಹಂತವನ್ನು ತಲುಪಿದಾಗ ಶಕಿಬ್ ಅಲ್ ಹಸನ್ ಕ್ಯಾಚ್ ಪಡೆದ ಅಕಿಲಾ ಧನಂಜಯ ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಸಿಟ್ಟನ್ನು ತೀರಿಸಿಕೊಂಡರು.

ಇವೆಲ್ಲಕ್ಕೂ ಉತ್ತರವಾಗಿ ಬಾಂಗ್ಲಾದೇಶ ಆಟಗಾರರೆಲ್ಲ ಪಂದ್ಯ ಗೆದ್ದ ಬಳಿಕ ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ಲಂಕನ್ನರಿಗೆ ಪ್ರತ್ಯುತ್ತರ ನೀಡಿದರು.

ಅತ್ತ ಬಾಂಗ್ಲಾ ನಾಯಕ ಶಕಿಬ್, ಅಂಗಿಯನ್ನು ಕಳಚಿ ಸಂಭ್ರಮಾಚರಿಸುವ ಮೂಲಕ ವಿವಾದಕ್ಕೆ ತುತ್ತಾಗಿದ್ದಾರೆ.

Comments are closed.