ಕ್ರೀಡೆ

ಮಹಮದ್ ಶಮಿ ವಿರುದ್ಧ ಪತ್ನಿ ದೂರು ದಾಖಲು

Pinterest LinkedIn Tumblr


ಕೊಲ್ಕತ್ತಾ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮಹಮದ್ ಶಮಿ ವಿರುದ್ಧ ಅವರ ಪತ್ನಿ ಹಸೀನ್ ಜಹಾನ್ ಕೌಟುಂಬಿಕ ದೌರ್ಜನ್ಯ ಹಾಗೂ ದಾಂಪತ್ಯ ದ್ರೋಹದ ದೂರು ದಾಖಲಿಸಿದ್ದಾರೆ.

ಕೊಲ್ಕತ್ತಾ ಜಂಟಿ ಪೊಲೀಸ್ ಆಯುಕ್ತ ಪ್ರವೀಣ್ ಠಾಕೂರ್ ಅವರಿಗೆ ಲಿಖಿತ ದೂರು ಸಲ್ಲಿಸಿರುವ ಜಹಾನ್ ಶಮಿ ತನ್ನನ್ನು ಹಿಂಸಿಸುತ್ತಿದ್ದರು ಹಾಗೂ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶಮಿ ವಿರುದ್ಧ ಕೊಲೆ ಯತ್ನ, ಕೌಟುಂಬಿಕ ಪ್ರಕರಣ ಹಾಗೂ ಆತನ ಸಹೋದರನ ವಿರುದ್ಧ ಅತ್ಯಾಚಾರದ ಪ್ರಕರಣವನ್ನು ದಾಖಲಿಸಲಾಗಿದೆ. ದೂರು ದಾಖಲಾಗಿರುವುದನ್ನು ಖಚಿತಪಡಿಸಿರುವ ಠಾಕೂರ್ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದರು.

ಹಸೀನ್ ಮಾತನಾಡಿ ಕಳೆದ ವರ್ಷ ಉತ್ತರ ಪ್ರದೇಶದ ಮಾವನವರ ಮನೆಗೆ ಹೋಗಿದ್ದಾಗ ಪತಿಯ ಸಹೋದರ ಹಸೀಬ್ ಅಹಮದ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದೇನೆ ಎಂದರು. ಶಮಿ ಹಾಗೂ ಹಸೀನ್ 2014ರಲ್ಲಿ ವಿವಾಹವಾಗಿದ್ದರು. ಕಳೆದ ಮೂರು ಹಸೀನ್ ಫೇಸ್‌ಬುಕ್‌ನಲ್ಲಿ ಶಮಿಯ ವಿವಾಹೇತರ ಸಂಬಂಧಗಳನ್ನು ಕುರಿತು ಭಾವಚಿತ್ರಗಳ ಸಹಿತ ಆಪಾದನೆ ಮಾಡಿದ್ದರು.

Comments are closed.