ಕ್ರೀಡೆ

ಮುಂಬೈ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣ ಮಾಡಿದ ಟೀಂ ಇಂಡಿಯಾದ ವೇಗಿ ಶಾರ್ದೂಲ್ ಕಂಡು ಅಚ್ಚರಿ ಪಟ್ಟ ಪ್ರಯಾಣಿಕರು!

Pinterest LinkedIn Tumblr

ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂತಿರುಗಿದ ನಂತರ ಟೀಂ ಇಂಡಿಯಾದ ವೇಗಿ ಶಾರ್ದೂಲ್ ಠಾಕೂರ್ ಮುಂಬೈನ ಲೋಕಲ್ ಟ್ರೈನ್ ನಲ್ಲಿ ಪ್ರಯಾಣ ಮಾಡಿದ್ದು ಬೋಗಿಯಲ್ಲಿದ್ದ ಸಹ ಪ್ರಯಾಣಿಕರು ಶಾರ್ದೂಲ್ ರನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ.

ಶಾರ್ದೂಲ್ ಠಾಕೂರ್ ತಾವೊಬ್ಬ ಸರಳ ಜೀವಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆಫ್ರಿಕಾ ಪ್ರವಾಸ ಮುಗಿಸಿ ತವರಿಗೆ ಬಂದಿಳಿದ ಶಾರ್ದೂಲ್ ಮನೆಗೆ ತೆರಳಲು ಲೋಕಲ್ ಟ್ರೈನ್ ನಲ್ಲಿ ಪ್ರಯಾಣ ಮಾಡಿದ್ದರು.

ಶಾರ್ದೂಲ್ ಅಂಧೇರಿಯಲ್ಲಿ ಲೋಕಲ್ ಟ್ರೈನ್ ಮೂಲಕ ಪಾಲ್ಘಾರ್ ಗೆ ಪ್ರಯಾಣ ಮಾಡಿದ್ದರು. ಈ ವೇಳೆ ಬೋಗಿಯಲ್ಲಿದ್ದವರು ಶಾರ್ದೂಲ್ ನನ್ನು ನೋಡಿ ಅಚ್ಚರಿ ಪಟ್ಟಿದ್ದು ಅವರ ಸರಳತೆಯನ್ನು ಮೆಚ್ಚಿದ್ದಾರೆ.

Comments are closed.