ಮನೋರಂಜನೆ

ಬಾತ್​ ಟಬ್​ನಲ್ಲಿ ಮುಳುಗಿ ಮೃತಪಟ್ಟ ಶ್ರೀದೇವಿ

Pinterest LinkedIn Tumblr


ದುಬೈ: ಹವಾ ಹವಾಯಿ ಖ್ಯಾತಿಯ ನಟಿ ಶ್ರೀದೇವಿ ಅವರು ಹೃದಯಾಘಾತದ ನಂತರ ಆಯತಪ್ಪಿ ಬಾತ್​ ಟಬ್​ಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ದೃಢ ಪಡಿಸಿದೆ.

ಹೃದಯಾಘಾತದ ನಂತರ ನಟಿ ಬಾತ್ ಟಬ್​ನಲ್ಲಿ ಮುಳುಗಿದ್ದು, ರಕ್ತದಲ್ಲಿ ಆಲ್ಕೋಹಾಲ್ ಅಂಶವಿರುವುದನ್ನು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ ಎಂದು ಸ್ಥಳೀಯ ಮಾಧ್ಯಮ ಖಲೀಜ್ ಟೈಮ್ಸ್ ವರದಿ ಮಾಡಿದ್ದರೆ, ಆಕಸ್ಮಿಕವಾಗಿ ಬಾತ್ ಟಬ್​ನಲ್ಲಿ ಬಿದ್ದು ಶ್ರೀದೇವಿ ಮೃತಪಟ್ಟಿದ್ದಾರೆ ಎಂದು ಗಲ್ಫ್​ ನ್ಯೂಸ್ ವರದಿ ಮಾಡಿದೆ.

ಮದುವೆ ಸಮಾರಂಭದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ವಿಶೇಷ ಔತಣಕೂಟದ ಮಧ್ಯೆ ಶ್ರೀದೇವಿ ವಾಶ್​ ರೂಂ ಬಳಸಲು ತಾವು ನೆಲೆಸಿದ್ದ ಕೊಠಡಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಪಾನಮತ್ತರೂ ಆಗಿದ್ದ ಅವರು ಕೆಲ ಸಮಯದ ನಂತರ ಮೃತಪಟ್ಟಿರುವುದು ಪತಿ ಬೋನಿ ಕಪೂರ್ ಗಮನಕ್ಕೆ ಬಂದಿತ್ತು.

ಶ್ರೀದೇವಿಯವರದ್ದು ಅಸಹಜ ಸಾವಾಗಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿರುವುದರಿಂದ ಈಗಾಗಲೇ ಶ್ರೀದೇವಿ ಅವರ ಫೋನಿನ ಕರೆಗಳನ್ನು ತನಿಖೆ ನಡೆಸಲಾಗುತ್ತಿದೆ. ಈ ಬೆಳವಣಿಗೆಯಿಂದಾಗಿ ಅವರ ಮೃತದೇಹವನ್ನು ಇಂದು ಕೂಡ ಭಾರತಕ್ಕೆ ತರುವುದು ಅನಿಶ್ಚಿತ ಎನ್ನಲಾಗಿದೆ.

Comments are closed.