ಕ್ರೀಡೆ

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸೀರೆಗೆ ಗುಡ್ ಬೈ ಹೇಳಿ ಪ್ಯಾಂಟ್ ಧರಿಸಲಿರುವ ಭಾರತೀಯ ಮಹಿಳಾ ಕ್ರೀಡಾಪುಟಗಳು !

Pinterest LinkedIn Tumblr

ನವದೆಹಲಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭಗೊಳ್ಳಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರೀಡಾಪುಟಗಳು ಪ್ಯಾಂಟ್ ಮತ್ತು ಬ್ಲೇಜರ್ ತೊಟ್ಟು ಪಥಸಂಚಲನದಲ್ಲಿ ಭಾಗವಹಿಸುವ ಮೂಲಕ ಹಳೆಯ ಸಂಪ್ರದಾಯವನ್ನು ಮುರಿಯಲಿದ್ದಾರೆ.

ಏಪ್ರಿಲ್ 4ರಿಂದ ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ನಲ್ಲಿ ಆರಂಭಗೊಳ್ಳಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಅಥ್ಲೀಟ್ಸ್ ಗಳು ಸೀರೆ ಬದಲಿಗೆ ಪ್ಯಾಂಟ್ ಹಾಗೂ ಬ್ಲೇಜರ್ ಧರಿಸಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ತಿಳಿಸಿದೆ.

ಭಾರತದ ಪುರುಷ ಹಾಗೂ ಮಹಿಳಾ ಅಥ್ಲೀಟ್ ಗಳು ನೌಕಾ ನೀಲಿ(ನೇವಿ ಬ್ಲೂ) ಬಣ್ಣದ ಪ್ಯಾಂಟ್ ಹಾಗೂ ಬ್ಲೇಜರ್ ಗಳನ್ನು ಧರಿಸಲಿದ್ದಾರೆ ಎಂದು ಐಒಎ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಒಎ ಕಾರ್ಯದರ್ಶಿ ರಾಜೀವ್ ಮೆಹ್ದಾ ಅಥ್ಲೀಟ್ ಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಉದ್ಘಾಟನಾ ಸಮಾರಂಭ 4-5 ಗಂಟೆಗಳ ಕಾಲ ನಡೆಯಲಿದ್ದು ಅಷ್ಟು ಹೊತ್ತು ಸೀರೆಯುಟ್ಟುಕೊಂಡಿರುವುದು ಕಷ್ಟ ಎಂದು ಅಥ್ಲೀಟ್ ಗಳು ತಿಳಿಸಿದ್ದಾರೆ.

Comments are closed.