ಕ್ರೀಡೆ

ಟೆಸ್ಟ್ ಶ್ರೇಯಾಂಕದ ಬಳಿಕ ಏಕದಿನದಲ್ಲೂ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ

Pinterest LinkedIn Tumblr


ದುಬೈ: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 6ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಏಕದಿನ ಪಂದ್ಯಗಳ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಇನ್ನು ಟೆಸ್ಟ್ ಶ್ರೇಯಾಕಂದಲ್ಲಿ 900 ಪಾಯಿಂಟ್ ಗಳಿಸಿದ್ದ ವಿರಾಟ್ ಕೊಹ್ಲಿ ಇದೀಗ ಏಕದಿನ ಕ್ರಿಕೆಟ್ ನಲ್ಲೂ 900ರ ಗಡಿ ದಾಟಿದ್ದಾರೆ. ಆ ಮೂಲಕ ಎಬಿ ಡಿವಿಲಿಯರ್ಸ್ ನಂತರ ಒಂದೇ ಸಮಯದಲ್ಲಿ 900 ಪಾಯಿಂಟ್ ಗಳಿಕೆ ಮಾಡಿರುವ ಏಕೈಕ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಇನ್ನು ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ 909 ಅಂಕ ಸಂಪಾದಿಸುವ ಮೂಲಕ ವೆಸ್ಟ್ ಇಂಡೀಸ್ ಆಟಗಾರ ಬ್ರಿಯಾನ್ ಲಾರಾ ಅವರ ದಾಖಲೆ ಮುರಿದಿದ್ದಾರೆ. ಲಾರಾ 1993ರಲ್ಲಿ 908 ಅಂಕ ಸಂಪಾದಿಸಿದ್ದರು.

ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ವೆಸ್ಟ್ ಇಂಡೀಸ್ ಆಟಗಾರ ಸರ್ ವಿವ್ ರಿಚರ್ಡ್ಸ್ ಅವರು 1985ರಲ್ಲಿ 935 ಅಂಕ ಗಳಿಸಿದ್ದು ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಜೋಹನ್ಸ್ ಬರ್ಗ್ ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ ನಲ್ಲಿ 54 ಮತ್ತು 41 ರನ್ ಸಿಡಿಸುವ ಮೂಲಕ ಕೊಹ್ಲಿ 12 ಅಂಕ ಗಳಿಸಿದ್ದು ಒಟ್ಟಾರೆ 912 ಅಂಕಗಳನ್ನ ಪಡೆಯುವ ಮೂಲಕ 911 ಅಂಕ ಗಳಿಸಿದ್ದ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಮುರಿದಿದ್ದಾರೆ.

ಏಕದಿನ ಬೌಲಿಂಗ್ ವಿಭಾಗದಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಹಾಗೂ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬೂಮ್ರಾ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ.

Comments are closed.