ಕ್ರೀಡೆ

ಬೌಂಡರಿ ಗೆರೆಯಲ್ಲಿ ಬುಮ್ರಾ ಸಿಕ್ಸರ್ ಸೇವ್-ಆದ್ರೂ ಸಿಕ್ಸ್!

Pinterest LinkedIn Tumblr


ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಭಾರತೀಯ ಫೀಲ್ಡರ್ ಜಸ್ಪ್ರೀತ್ ಬುಮ್ರಾ ಅದ್ಭುತವಾಗಿ ಮೇಲಕ್ಕೆ ಡೈವ್ ಮಾಡುವ ಮೂಲಕ ಸಿಕ್ಸರನ್ನು ತಡೆಗಟ್ಟಿದ್ದರು.

ಆದರೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಳವಡಿಸಿರುವ ನೂತನ ನಿಯಮ ವಿಲನ್ ಆಗಿ ಮಾರ್ಪಟ್ಟಿತ್ತು. ಸಿಕ್ಸರ್ ಸೇವ್ ಮಾಡುವ ಮೊದಲು ಬೌಂಡರಿ ಗೆರೆ ಸ್ಪರ್ಶಿಸಿರುವುದು ಭಾರತಕ್ಕೆ ಮುಳುವಾಗಿತ್ತು.

ಬುಮ್ರಾ ಸಿಕ್ಸರ್ ಸೇವ್ ಮಾಡುವ ಮೊದಲು ಬೌಂಡರಿ ಗೆರೆ ಸ್ಪರ್ಶಿಸಿ ಅಲ್ಲಿಂದಲೇ ಮೇಲಕ್ಕೆ ಜಂಪ್ ಮಾಡಿದ್ದರು. ಇದರಿಂದಾಗಿ ಚೆಂಡನ್ನು ಒಳಕ್ಕೆ ಅಟ್ಟುವಲ್ಲಿ ಯಶಸ್ವಿಯಾದರೂ ಥರ್ಡ್ ಅಂಪೈರ್ ಮನವಿಯನ್ನು ಪುರಸ್ಕರಿಸಲಿಲ್ಲ.

ಪರಿಣಾಮ ಹಾರ್ದಿಕ್ ಪಾಂಡ್ಯ ಎಸೆದ ಚೆಂಡಿನಲ್ಲಿ ಡೇವಿಡ್ ಮಿಲ್ಲರ್ ಹೊಡೆತವನ್ನು ಸಿಕ್ಸರ್ ಎಂದು ಘೋಷಿಸಲಾಯಿತು. ಆದರೂ ಬುಮ್ರಾ ಫೀಲ್ಡಿಂಗ್ ನೋಡುಗರಲ್ಲಿ ರೋಮಾಂಚನವನ್ನು ಸೃಷ್ಟಿ ಮಾಡಿತ್ತು.

ಅತ್ತ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಸಹ ಕೈ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದರು.

Comments are closed.