ಕ್ರೀಡೆ

ಭಾರತದ ತ್ರಿವರ್ಣಧ್ವಜಕ್ಕೆ ಗೌರವ ಸೂಚಿಸಿದ ಪಾಕ್ ಆಟಗಾರ ಆಫ್ರಿದಿ ! ಭಾರತದ ಕ್ರಿಕೆಟ್‌ಅಭಿಮಾನಿಗಳು ಕೊಂಡಾಡಲು ಕಾರಣವಾದ ಈ ವೀಡಿಯೊ ಒಮ್ಮೆ ನೋಡಿ….

Pinterest LinkedIn Tumblr

https://youtu.be/pO4eqRWE6ek

ಸೇಂಟ್‌ ಮೊರ್ಟಿಜ್‌, ಸ್ವಿಟ್ಜರ್‌ಲೆಂಡ್‌: ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್‌ಆಫ್ರಿದಿ ಭಾರತದ ಕ್ರಿಕೆಟ್‌ಅಭಿಮಾನಿಗಳ ಜತೆಗೆ ತ್ರಿವರ್ಣಧ್ವಜದ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದರು.

ಸೇಂಟ್‌ಮೇರಿಸ್‌ಕೆರೆ ಬದಿಯಲ್ಲಿ ನಡೆಯುತ್ತಿರುವ ಐಸ್‌ಕ್ರಿಕೆಟ್‌ಚಾಲೆಂಜ್ ಪಂದ್ಯದಲ್ಲಿ ಸೆಹ್ವಾಗ್‌ನೇತೃತ್ವದ ಪ್ಯಾಲೇಸ್‌ತಂಡದ ಎದುರು ಆಫ್ರಿದಿ ನೇತೃತ್ವದ ರಾಯಲ್ಸ್ ತಂಡವು ಮುನ್ನಡೆ ಕಾಯ್ದುಕೊಂಡಿತ್ತು. ಈ ವೇಳೆ ಆಫ್ರಿದಿ ಅವರನ್ನು ಸುತ್ತುವರಿದ ಅಭಿಮಾನಿಗಳು ಅವರ ಜತೆಗೆ ಚಿತ್ರ ತೆಗೆಸಿಕೊಳ್ಳಲು ಮುಗಿಬಿದ್ದರು. ಈ ವೇಳೆ ಭಾರತದ ಯುವತಿಯೊಬ್ಬಳು ಸೆಲ್ಫಿಗಾಗಿ ಮನವಿ ಮಾಡಿದಳು. ಆದರೆ ಆಕೆ ಭಾರತದ ತ್ರಿವರ್ಣಧ್ವಜವನ್ನು ಕೈಯಲ್ಲಿ ಮಡಚಿ ಇಟ್ಟುಕೊಂಡಿದ್ದನ್ನು ಆಫ್ರಿದಿ ಗಮನಿಸಿದರು.

ನಂತರ ಧ್ವಜವನ್ನು ಪೂರ್ತಿಯಾಗಿ ಬಿಚ್ಚಿ, ಗೌರವಯುತವಾಗಿ ಹಿಡಿಯುವಂತೆ ಸೂಚಿಸಿದ ಅವರು, ಆಕೆಯ ಜತೆ ಚಿತ್ರ ತೆಗೆಸಿಕೊಂಡರು. ಆಫ್ರಿದಿ ಅವರ ಈ ನಡವಳಿಕೆಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್‌ಆಗಿದೆ.

Comments are closed.