ಕ್ರೀಡೆ

ಕೊಹ್ಲಿಯ ನಾಯಕತ್ವ ಚಹಾಲ್‌‌ರನ್ನು ಕೆಚ್ಚೆದೆಯ ಬೌಲರ್ ಆಗಿ ರೂಪಾಂತರಿಸಿದೆ: ಡೇನಿಯಲ್ ವೆಟೋರಿ

Pinterest LinkedIn Tumblr


ಸೇಂಟ್ ಮೊರಿಟ್ಜ್(ಸ್ವಿಟ್ಜರ್ಲ್ಯಾಂಡ್): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ನಾಯಕತ್ವ ಯಜುವೇಂದ್ರ ಚಹಾಲ್‌‌ರಂತ ಕೆಚ್ಚೆದೆಯ ಯುವ ಸ್ಪಿನ್ ಬೌಲರ್ ಆಗಿ ರೂಪಾಂತರಿಸಿದೆ ಎಂದು ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ, ಕ್ರಿಕೆಟ್ ದಿಗ್ಗಜ ಡೇನಿಯಲ್ ವೆಟೋರಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ಡೇನಿಯಲ್ ವೆಟೋರಿ ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ 11 ವಿಕೆಟ್ ಗಳನ್ನು ಪಡೆಯುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್ ಪಂದ್ಯವೊಂದರಲ್ಲಿ ಚಹಾಲ್ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದರು. ಚಿನ್ನಸ್ವಾಮಿಯಂತ ಚಿಕ್ಕ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಲ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸುವುದು ಸುಲಭದ ಕೆಲಸವಲ್ಲ ಎಂದು ಡೇನಿಯಲ್ ವೆಟೋರಿ ಹೇಳಿದ್ದಾರೆ.

ಆರ್ಸಿಬಿ ಪರ ಆಡುವಾಗ ವಿರಾಟ್ ಕೊಹ್ಲಿ ಚಹಾಲ್ ತಲೆಯಲ್ಲಿ ಬ್ಯಾಟ್ಸ್ ಮನ್ ಗಳ ಮೇಲೆ ಆಕ್ರಮಣಕಾರಿ ಬೌಲಿಂಗ್ ದಾಳಿ ಮಾಡುವಂತೆ ಸೂಚಿಸಿದ್ದರು. ಇದೀಗ ಆಫ್ರಿಕಾ ಪ್ರವಾಸದಲ್ಲೂ ಇದನ್ನು ಕಾಣಬಹುದಾಗಿದೆ ಎಂದರು.

ವಿರಾಟ್ ಕೊಹ್ಲಿಯ ನಾಯಕತ್ವದ ಶೈಲಿಯ ಬಗ್ಗೆ ಬಹಳಷ್ಟು ವಿವಾದಗಳಿದ್ದರೂ ಡೇನಿಯಲ್ ವೆಟೋರಿ ಮಾತ್ರ ಭಾರತದ ನಾಯಕನ ವರ್ತನೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದಾರೆ.

Comments are closed.