ಕ್ರೀಡೆ

ಡೊಮೇನ್ ಸಮಸ್ಯೆಯಿಂದಾಗಿ ಒಂದು ದಿನ ಸ್ಥಗಿತಗೊಂಡಿದ್ದ ಬಿಸಿಸಿಐ ವೈಬ್‍ಸೈಟ್!

Pinterest LinkedIn Tumblr


ನವದೆಹಲಿ: ಡೊಮೇನ್ ಹೆಸರನ್ನು ನವೀಕರಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನ ವೈಬ್‍ಸೈಟ್ ಸೇವೆಗಳು 18 ಗಂಟೆಗಳ ಕಾಲ ಸ್ಥಗತಗೊಂಡಿದ್ದು ಇದೀಗ ಪುನಃಸ್ಥಾಪನೆಗೊಂಡಿದೆ.

ಬಿಸಿಸಿಐ ಟಿವಿ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರ ಹೆಸರಿನಲ್ಲಿತ್ತು. ಇದರಿಂದಾಗಿ ಭಾನುವಾರ ಬೆಳಗ್ಗಿನಿಂದ ಬಿಸಿಸಿಐ ಟಿವಿ ವೈಬ್ ಸೈಟ್ ಗಳು ಸ್ಥಗಿತಗೊಂಡಿತ್ತು. 18 ಗಂಟೆಗಳ ನಂತರ ಇದೀಗ ನವೀಕರಣಗೊಂಡಿತ್ತು ವೈಸ್ ಸೈಟ್ ಕಾರ್ಯನಿರ್ವಹಿಸುತ್ತಿದೆ.

ವೆಬ್ ಸೈಟ್ ನೋಂದಣಿದಾರರು register.com ಮತ್ತು namejet.com ಡೊಮೇನ್ ಹೆಸರನ್ನು ಸಾರ್ವಜನಿಕ ಹರಾಜಿನಲ್ಲಿ ಇರಿಸಿದ್ದು ಇದನ್ನು ಯುಎಸ್ಡಿ 270 ಬೀಡ್ ಮಾಡಿ ಪಡೆಯಲಾಗಿತ್ತು. ಈ ಡೊಮೇನ್ 2-2-2006 ರಿಂದ 2-2-2019ರವರೆಗೆ ಮಾತ್ರ ಮಾನ್ಯತೆ ಪಡೆದಿದ್ದು 2018ರ ಫೆಬ್ರವರಿ 3ರಂದು ನವೀಕರಣ ಮಾಡಿಕೊಳ್ಳಬೇಕಿತ್ತು. ನವೀಕರಣ ಮಾಡಿಕೊಳ್ಳುವಲ್ಲಿ ಬಿಸಿಸಿಐ ವಿಫಲಾಗಿದ್ದರಿಂದ 18 ಗಂಟೆಗಳ ಕಾಲ ವೆಬ್ ಸೈಟ್ ಸ್ಧಗಿತಗೊಂಡಿತ್ತು.

Comments are closed.