ಕ್ರೀಡೆ

ಪ್ರೇಯಸಿ ಆಶಿತಾ ಜತೆ ಕರ್ನಾಟಕದ ಆಟಗಾರ ಮಾಯಾಂಕ್ ಅಗರ್ವಾಲ್ ನಿಶ್ಚಿತಾರ್ಥ

Pinterest LinkedIn Tumblr

ಬೆಂಗಳೂರು: ಗೆಳತಿ ಆಶಿತಾ ಸೂದ್ ಅವರೊಂದಿಗೆ ಕರ್ನಾಟಕ ಕ್ರಿಕೆಟ್ ತಂಡದ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ವಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕಳೆದ ಬುಧವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಎರಡು ಕುಟುಂಬದ ಆಪ್ತರು ಮತ್ತು ಕೆಲ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೇರವೇರಿದೆ. ಆಶಿತಾ ರಾಜ್ಯದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರವೀಣ್ ಸೂದ್ ಅವರ ಮಗಳು.

ಕಳೆದ 7 ವರ್ಷಗಳಿಂದ ಮಾಯಾಂಕ್ ಮತ್ತು ಆಶಿತಾ ಸ್ನೇಹಿತರಾಗಿದ್ದರು. ಆಶಿತಾ ಇತ್ತೀಚೆಗಷ್ಟೇ ಲಂಡನ್ ನಲ್ಲಿ ಉನ್ನತ ಪದವಿ ಮುಗಿಸಿದ್ದಾರೆ. ಇದೇ ವರ್ಷಾಂತ್ಯದಲ್ಲಿ ಬೆಂಗಳೂರಿನಲ್ಲಿ ಇವರ ಮದುವೆ ಸಮಾರಂಭ ನಡೆಯಲಿದೆ.

Comments are closed.