ಅಂತರಾಷ್ಟ್ರೀಯ

ವೀಲ್‌ಚೇರ್‌ನಲ್ಲೇ ಪರ್ವತವನ್ನೇರಿ ದಾಖಲೆ ಬರೆದ ಅಥ್ಲೀಟ್

Pinterest LinkedIn Tumblr


ಹಾಂಕಾಂಗ್: ಏಳು ವರ್ಷಗಳ ಹಿಂದೆ ನಡೆದ ಕಾರು ಅಪಘಾತವೊಂದರಲ್ಲಿ ಹಾಂಕಾಂಗ್ ವೃತ್ತಿಪರ ಪರ್ವತಾರೋಹಿ ಲಾಯ್ ಚಿ ವಾಯ್ ಅವರಿಗೆ ನಡೆದಾಡಲು ಸಾಧ್ಯವಾಗದಂಹತ ಕರುಣಾಜನಕ ಪರಿಸ್ಥಿತಿ ಎದುರಾಗಿತ್ತು.

ಆದರೆ ಸಾಧನೆಯ ಛಲವೊಂದಿದ್ದರೆ ಏನೇ ಬೇಕಾದರೂ ಸಾಧಿಸಬಹುದೆಂಬ ಅಚಲ ವಿಶ್ವಾಸದೊಂದಿಗೆ ವೀಲ್‌ಚೇರ್‌ನಲ್ಲೇ ಪರ್ವತವನ್ನೇರುವ ಮೂಲಕ ನೂತನ ದಾಖಲೆ ಬರೆದಿದ್ದಾರೆ.

ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ ಎತ್ತರಕ್ಕೆ ಸಮಾನವಾದ 495 ಮೀಟರ್ ಎತ್ತರದ (1624 ಅಡಿ) ಲಯನ್ ರಾಕ್ ಪರ್ವತವನ್ನು ಲಾಯ್ ಏರಿದ್ದಾರೆ.

ಪವರ್ತವನ್ನೇರುವುದು ತಮ್ಮ ಪಾಲಿಗೆ ಕನಸಾಗಿದ್ದು, ದೈಹಿಕ ಅಸಮರ್ಥವಾಗಿರುವ ಅಥ್ಲೀಟ್‌ಗಳಿಗೆ ತಮ್ಮ ಸಾಧನೆಯು ಸ್ಫೂರ್ತಿದಾಯಕವಾಗುವ ನಂಬಿಕೆಯಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಸಾಧನೆಗಾಗಿ ಚೀನಾ ಮೂಲದ ಈ ಅಥ್ಲೀಟ್, ಲೌರೆಸ್ ಮಾಸದ ಅತ್ಯುತ್ತಮ ಕ್ರೀಡಾ ಕ್ಷಣಕ್ಕೆ ನಾಮ ನಿರ್ದೇಶನ ಪಡೆದಿದ್ದಾರೆ. ಅಲ್ಲದೆ ಸ್ಥಿರತೆ, ಚೇತರಿಸಿಕೊಳ್ಳುವಿಕೆ ಹಾಗೂ ಏಕತೆಯಲ್ಲಿ ಹಾಂಕಾಂಗ್ ಸ್ಫೂರ್ತಿಯನ್ನು ಮೆರೆದಿದ್ದಾರೆ.

ವರ್ಷದ ಶ್ರೇಷ್ಠ ಕ್ರೀಡಾಪಟುವಿಗೆ ಲೌರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ ನೀಡಲಾಗುತ್ತದೆ. ಹಾಗೆಯೇ ತಿಂಗಳ ಶ್ರೇಷ್ಠ ಕ್ರೀಡಾ ಕ್ಷಣವನ್ನು ಗುರುತಿಸಿ ಗೌರವಿಸಲಾಗುತ್ತದೆ.

ಏಷಿಯನ್ ರಾಕ್ ಕ್ಲೈಬಿಂಗ್ ಚಾಂಪಿಯನ್‌ಶಿಪ್ಸ್‌ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಲಾಯ್, ಎಕ್ಸ್-ಗೇಮ್ ಎಕ್ಸ್‌ಟ್ರೀಮ್ ಕ್ರೀಡೆ ಗೆದ್ದ ಮೊದಲ ಚೀನಾ ಅಥ್ಲೀಟ್ ಎಂದೆನಿಸಿಕೊಂಡಿದ್ದರು. ಅಲ್ಲದೆ ಕಾರು ಅಪಘಾತಕ್ಕೀಡಾದ ಐದನೇ ವಾರ್ಷಿಕೋತ್ಸವದ ಅಂಗವಾಗಿ 2016 ಡಿಸೆಂಬರ್ 9ರಂದು ಲಯನ್ ರಾಕ್ ಏರಿದ ಸಾಧನೆ ಮಾಡಿದ್ದರು.

Comments are closed.