ಮನೋರಂಜನೆ

ಪೋರ್ನ್ ಸ್ಟಾರ್ ಜತೆಗೆ ರಾಮ್ ಗೋಪಾಲ್ ವರ್ಮಾ ವೀಡಿಯೋ

Pinterest LinkedIn Tumblr


ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿ ಮಾಡುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ಇನ್ನೊಂದು ಮಹತ್ವದ ಪ್ರಾಜೆಕ್ಟ್‌ಗೆ ಕೈಹಾಕಿದ್ದಾರೆ. ಪೋರ್ನ್ ಸ್ಟಾರ್ ಒಬ್ಬರಿಗೆ ನಿರ್ದೇಶನ ಮಾಡಬೇಕೆಂಬ ತಮ್ಮ ಕನಸನ್ನು ಕಡೆಗೂ ನನಸು ಮಾಡಿಕೊಂಡಿದ್ದಾರೆ.

ಒಬ್ಬ ಜನಪ್ರಿಯ ಪೋರ್ನ್ ಸ್ಟಾರ್ ಜತೆಗೆ ವಿಶೇಷ ವೀಡಿಯೋ ಒಂದನ್ನು ಚಿತ್ರೀಕರಿಸಿದ್ದಾರೆ. ಈ ವಿಷಯವನ್ನು ಟ್ವಿಟ್ಟರ್ ಮೂಲಕ ವರ್ಮಾ ಬಹಿರಂಗಪಡಿಸಿದ್ದಾರೆ. ವಯಸ್ಕರ ಚಿತ್ರಗಳಲ್ಲಿ ಅಭಿನಯಿಸುವ ಮಿಯಾ ಮಲ್ಕೋವಾ ಎಂಬ ನಟಿಯ ಜತೆಗೆ ‘ಗಾಡ್, ಸೆಕ್ಸ್ ಅಂಡ್ ಟ್ರೂತ್’ ಎಂಬ ಹೆಸರಿನ ವೀಡಿಯೋವನ್ನು ತೆಗೆದಿದ್ದಾರೆ.

‘ಸನ್ನಿ ಲಿಯೋನ್ ಜತೆ ಸಿನಿಮಾ ಮಾಡುವ ಅವಕಾಶ ಸಿಗದಿದ್ದರೂ, ನಿಮ್ಮೊಂದಿಗೆ ಮಾಡಿದ ಅನುಭವವನ್ನು ಮರೆಯಲಾರೆ. ನಿಮಗೆ ಕೃತಜ್ಞತೆಗಳು’ ಎಂದು ಟ್ವೀಟಿಸಿದ್ದಾರೆ. ನೀನೊಂದು ಸುಂದರವಾದ ಕಲಾಕೃತಿ, ನಾನೊಬ್ಬ ಫ್ರೇಮ್ ಮೇಕರ್’ ಎಂದು ವರ್ಮಾ ಹೇಳಿದ್ದಾರೆ.

ವರ್ಮಾ ನಿರ್ದೇಶಿಸುತ್ತಿರುವ ‘ಗಾಡ್ ಸೆಕ್ಸ್ ಅಂಡ್ ಟ್ರೂತ್’ ಶೂಟಿಂಗ್ ಯೂರೋಪ್‌ನಲ್ಲಿ ನಡೆದಿದೆ ಎಂದು ನಟಿ ಮಿಯಾ ಮಲ್ಕೋವಾ ಸಹ ಟ್ವೀಟ್ ಮಾಡಿದ್ದಾರೆ. ಭಾರತದ ತೆರೆಗೆ ಸನ್ನಿ ಲಿಯೋನ್ ಬಳಿಕ ಅಡಿಯಿಡುತ್ತಿರುವ ನೀಲಿ ಚಿತ್ರಗಳ ನಟಿ ತಾನೇ ಎಂದು ಹೇಳಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಕೆಲವು ಅರೆನಗ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಜನವರಿ 16ರಂದು ಬಿಡುಗಡೆಯಾಗುತ್ತಿದೆ ಎಂದು ವರ್ಮಾ ಪ್ರಕಟಿಸಿದ್ದಾರೆ.

Comments are closed.