
ಹೊಸದಿಲ್ಲಿ: ಕಳೆದ ಡಿ.11ರಂದು ಇಟಲಿಯಲ್ಲಿ ಮದುವೆಯಾಗಿದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಆರತಕ್ಷತೆ ಸಮಾರಂಭ ನಿನ್ನೆ ಗುರುವಾರ ದಿಲ್ಲಿಯಲ್ಲಿ ನಡೆದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ನೂತನ ವಧೂವರರಿಗೆ ಶುಭ ಕೋರಿದರು.
ಅನುಷ್ಕಾ ಮತ್ತು ವಿರಾಟ್ ಅವರು ಖುದ್ದು ಪ್ರಧಾನಿಯನ್ನು ಭೇಟಿಯಾಗಿ ಆರತಕ್ಷತೆಗೆ ಆಹ್ವಾನಿಸಿದ್ದರು.
ನೂತನ ವಿವಾಹಿತ ಜೋಡಿ ಪ್ರಧಾನಿ ಮೋದಿ ಅವರೊಂದಿಗೆ ತಾಜ್ ಪ್ಯಾಲೇಸ್ ನ ರಾಜಾ ಬಾಗ್‌ನಲ್ಲಿ ಫೋಟೋ ಸೆಶನ್ ನಡೆಸಿತು.
ದಿಲ್ಲಿ ಆರತಕ್ಷತೆ ಬಳಿಕ ಮುಂಬಯಿಯಲ್ಲಿ ಡಿ.26ರಂದು ವಿರಾಟ್-ಅನುಷ್ಕಾ ಆರತಕ್ಷತೆ ನಡೆಯಲಿದೆ. ಆ ಬಳಿಕ ನವವಿವಾಹಿತ ಜೋಡಿ ದಕ್ಷಿಣ ಆಫ್ರಿಕಕ್ಕೆ ಹಾರಲಿದೆ. ಅಲ್ಲಿ ಕೊಹ್ಲಿ ದ.ಆಫ್ರಿಕ ವಿರುರದ್ಧದ ಮುಂಬರುವ ಸರಣಿಯನ್ನು ಆಡಲಿದ್ದಾರೆ.
ಮುಂಬಯಿಗೆ ಮರಳುವ ಮುನ್ನ ಅನುಷ್ಕಾ ಅವರು ಪತಿಯೊಂದಿಗೆ ಹೊಸ ವರ್ಷದ ಮುನ್ನಾ ದಿನವನ್ನು ಕಳೆಯಲಿದ್ದಾರೆ. ಆ ಬಳಿಕ ಅನುಷ್ಕಾ ಅವರು ಮುಂಬಯಿಗೆ ಬಂದು ಶಾರುಖ್ ಖಾನ್ ಜತೆಗೆ, ಆನಂದ್ ಎಲ್ ರಾಯ್ ಅವರ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
-ಉದಯವಾಣಿ
Comments are closed.