ಕ್ರೀಡೆ

ವಿರುಷ್ಕಾ ಆರತಕ್ಷತೆಯಲ್ಲಿ ಕ್ರಿಕೆಟಿಗರ ಮೆರಗು

Pinterest LinkedIn Tumblr


ಹೊಸದಿಲ್ಲಿ: ಇಟಲಿಯಲ್ಲಿ ವಿವಾಹಿತರಾಗಿ ಹನಿಮೂನ್ ಆಚರಿಸಿದ ಬಳಿಕ ತವರಿಗೆ ಬಂದಿಳಿದಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ದಿಲ್ಲಿಯಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಡಿಸೆಂಬರ್ 21ರಂದು ದಿಲ್ಲಿಯ ತಾಜ್‌ ಡಿಪ್ಲೊಮೆಟಿಕ್‌ ಎನ್‌ಕ್ಲೇವ್‌ ಪಂಚತಾರಾ ಹೋಟೆಲ್‌ನಲ್ಲಿ ನಡೆದ ವಿರುಷ್ಕಾ ಆರತಕ್ಷತೆಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಇವರಲ್ಲಿ ಕ್ರಿಕೆಟಿಗರಾದ ಶಿಖರ್ ಧವನ್, ಗೌತಮ್ ಗಂಭೀರ್ ಹಾಗೂ ಸುರೇಶ್ ರೈನಾ ಸಹ ಪ್ರಮುಖರಾಗಿದ್ದರು. ಕುಟುಂಬ ಸಮೇತ ಆಗಮಿಸಿದ ಇವರೆಲ್ಲರೂ ನವ ಜೋಡಿಗೆ ಶುಭ ಹಾರೈಸಿದರು.

ವಿರುಷ್ಕಾ ಜೋಡಿಯ ಜತೆ ಧವನ್ ಕೂಡಾ ಗಬ್ಬರ್ ಶೈಲಿಯಲ್ಲಿ ನೃತ್ಯ ಹಾಕುವ ಗಮನ ಸೆಳೆದರು.

ಪ್ರಸ್ತುತ ಟೀಮ್ ಇಂಡಿಯಾ ಆಟಗಾರರು ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಡಿ.26ರಂದು ಮುಂಬಯಿನಲ್ಲಿ ಟೀಮ್‌ ಇಂಡಿಯಾ ಆಟಗಾರರು ಮತ್ತು ಸಿನಿಮಾ ಮಂದಿಗಾಗಿ ಮತ್ತೊಂದು ಆರತಕ್ಷತೆಯೂ ನಡೆಯಲಿದೆ.

Comments are closed.