ಕ್ರೀಡೆ

ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ನಡೆದ ಹಾಸ್ಯಾಸ್ಪದ ಘಟನೆ ಗೊತ್ತಾ..?

Pinterest LinkedIn Tumblr

ನವದೆಹಲಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹಾಸ್ಯಾಸ್ಪದ ಘಟನೆಯೊಂದು ನಡೆದಿದೆ.

ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವೀಂದ್ರ ಜಡೇಜಾ ಅವರು ತಮ್ಮ ಬೌಲಿಂಗ್ ನಲ್ಲಿ ಎದುರಾಳಿ ತಂಡದ ಬ್ಯಾಟ್ಸ್ ಮನ್ ಲಕ್ಮಲ್ ಅವರನ್ನು ಬೌಲ್ಡ್ ಮಾಡಿದರು. ಆದರೆ ವಿಕೆಟ್ ಬಿದ್ದಿದ್ದನ್ನು ಗಮನಿಸಿದ ಜಡೇಜಾ ಅಂಪೈರ್ ಬಳಿ ಎಲ್ ಬಿಡಬ್ಲ್ಯೂಗೆ ಮನವಿ ಮಾಡುತ್ತಿದ್ದರು. ಕೊನೆಗೆ ಅಂಪೈರ್ ವಿಕೆಟ್ ಬಿದ್ದಿರುವುದನ್ನು ಗಮನಿಸುವಂತೆ ಸನ್ನೆ ಮಾಡುವವರೆಗೆ ಅಪೀಲ್ ಮಾಡಿದ್ದಾರೆ.

ಇನ್ನು ಜಡೇಜಾ ಅಪೀಲ್ ಮಾಡುತ್ತಿರುವುದನ್ನು ಗಮನಿಸಿದ ಇತರ ಆಟಗಾರರು ಜೋರಾಗಿ ಕೂಗುವ ಪ್ರಯತ್ನ ಮಾಡಿ ರವೀಂದ್ರ ಜಡೇಜಾರ ಗಮನವನ್ನು ತಮ್ಮ ಕಡೆ ಸೆಳೆಯಲುಮಾಡಿದ ಪ್ರಯತ್ನ ವಿಫಲವಾಯಿತು. ಇದೇ ವೇಳೆ ಬ್ಯಾಟ್ಸ್ ಮನ್ ಲಕ್ಮಲ್ ಸಹ ಬ್ಯಾಟ್ ಗೆ ಮೊದಲು ಚೆಂಡು ತಾಗಿದ್ದರಿಂದ ನಿರಾಳವಾಗಿದ್ದರು. ಆದರೆ ಹಿಂದೆ ತಿರುಗಿ ನೋಡಿದರೇ ಎಡಬದಿಯಲ್ಲಿದ್ದ ವಿಕೆಟ್ ಕೆಳಗೆ ಬಿದ್ದಿರುವುದನ್ನು ಗಮನಿಸಿ ನಂತರ ಪೆವಿಲಿಯನ್ ಸೇರಿದರು.

ದೆಹಲಿಯ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಹಾಗೂ 2ನೇ ಇನ್ನಿಂಗ್ಸ್ ನಲ್ಲಿ ಒಟ್ಟು ನಾಲ್ಕು ವಿಕೆಟ್ ಗಳನ್ನು ಪಡೆದಿದ್ದಾರೆ.

Comments are closed.