ಕ್ರೀಡೆ

ಕ್ರಿಕೆಟ್ ದೇವರು ಸಚಿನ್‌ರನ್ನೇ ಮೀರಿಸಿದ ಪೂಜಾರ

Pinterest LinkedIn Tumblr

ನಾಗ್ಪುರ: ಭಾರತ ಕ್ರಿಕೆಟ್ ತಂಡದ ಕಲಾತ್ಮಕ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ, ಮಾಜಿ ಬ್ಯಾಟಿಂಗ್ ದಿಗ್ಗಜ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಮೀರಿ ನಿಂತಿದ್ದಾರೆ.

ಶ್ರೀಲಂಕಾ ವಿರುದ್ಧ ನಾಗ್ಪುರದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪೂಜಾರ ಆಕರ್ಷಕ ಶತಕ (143) ಸಾಧನೆ ಮಾಡಿದ್ದರು. ಈ ಮೂಲಕ ಭಾರತ ನೆಲದ ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್ ಪೂರೈಸಿದ್ದಾರೆ.

ಕೇವಲ 53 ಇನ್ನಿಂಗ್ಸ್‌ಗಳಲ್ಲೇ ಪೂಜಾರ ಈ ಮೈಲುಗಲ್ಲು ತಲುಪಿದ್ದಾರೆ. ಈ ಮೂಲಕ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. ಸಚಿನ್ ಇದಕ್ಕಾಗಿ 55 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.

ಈ ಸೌರಾಷ್ಟ್ರ ಬ್ಯಾಟ್ಸ್‌ಮನ್ ಈಗ ಭಾರತದಲ್ಲಿ ಆಡಿರುವ 32 ಪಂದ್ಯಗಳಲ್ಲಾಗಿ 64.12ರ ಬ್ಯಾಟಿಂಗ್ ಸರಾಸರಿಯಲ್ಲಿ 3014 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ ಹಾಗೂ 13 ಅರ್ಧಶತಕಗಳು ಸೇರಿವೆ.

ಕಾಕತಾಳೀಯವೆಂಬಂತೆ ಸಚಿನ್ ಕೂಡಾ 3000 ಟೆಸ್ಟ್ ರನ್‌ಗಳನ್ನು ನಾಗ್ಪುರ ಮೈದಾನದಲ್ಲೇ ದಾಟಿದ್ದರು. 2000ನೇ ಇಸವಿಯ ನವೆಂಬರ್ 26ರಂದು ಸಚಿನ್ ಈ ಸಾಧನೆ ಮಾಡಿದ್ದರು.

Comments are closed.