ಕ್ರೀಡೆ

ಪಾಕ್ ಕ್ರಿಕೆಟಿಗ ಹಫೀಜ್‌‌ಗೆ ಬೌಲಿಂಗ್ ನಿಷೇಧ

Pinterest LinkedIn Tumblr


ಹೊಸದಿಲ್ಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಹಫೀಜ್ ಮೇಲೆ ಬೌಲಿಂಗ್ ಮಾಡುವುದರಿಂದ ನಿಷೇಧ ಹೇರಲಾಗಿದೆ.

ಶಂಕಾಸ್ಪದ ಬೌಲಿಂಗ್ ಹಿನ್ನಲೆಯಲ್ಲಿ ಪಾಕ್ ಬೌಲರ್ ಶೈಲಿಯನ್ನು ಪರಿಶೀಲಿಸಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಯಮ ಉಲ್ಲಂಘನೆಯನ್ನು ಖಚಿತಪಡಿಸಿದೆ.

ಇದರಂತೆ ತತ್ ಕ್ಷಣದಿಂದ ಜಾರಿಗೆ ಬರುವಂತೆಯೇ ಹಫೀಜ್ ಮೇಲೆ ನಿಷೇಧ ಹೇರಲಾಗಿದೆ.

ಇದರೊಂದಿಗೆ ಇದು ಮೂರನೇ ಬಾರಿಗೆ ಹಫೀಜ್‌ಗೆ ಬೌಲಿಂಗ್ ಮೇಲೆ ನಿಷೇಧ ಹೇರಲಾಗಿದೆ. ಕೊನೆಯ ಬಾರಿಗೆ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅನುಮಾನಾಸ್ಪಾದ ಬೌಲಿಂಗ್ ಶೈಲಿಯಿಂದಾಗಿ ಅಂಪೈರ್ ದೂರು ನೀಡಿದ್ದರು.

37ರ ಹರೆಯದ ಹಫೀಜ್ ಅವರು ಮೊದಲ ಬಾರಿಗೆ 2014ರಲ್ಲಿ ಮತ್ತು 2015ರಲ್ಲಿ ಎರಡನೇ ಬಾರಿಗೆ ಒಂದು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದರು.

ಬಳಿಕ 2016ರಲ್ಲಿ ಬ್ರಿಸ್ಪೇನ್ ರಾಷ್ಟ್ರೀಯ ಕ್ರಿಕೆಟ್ ಸೆಂಟರ್‌ನಲ್ಲಿ ಮರುಪರಿಶೀಲನೆಗೊಳಗಾಗಿ ತೊಡಕುಗಳನ್ನೆಲ್ಲ ನಿವಾರಿಸಿ ಬೌಲಿಂಗ್ ಮುಂದುವರಿಸಿದ್ದರು. ಇದೀಗ ಮತ್ತೆ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Comments are closed.