ಕರಾವಳಿ

ಕಾಪು ಕಡಲತೀರದಲ್ಲಿ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ ಆರಂಭ

Pinterest LinkedIn Tumblr

ಉಡುಪಿ: ಸಮುದ್ರದ ಆಳಕ್ಕಿಳಿದು ಅಲ್ಲಿನ ಜೀವ ವೈವಿಧ್ಯ ಹಾಗೂ ಸೌಂದರ್ಯವನ್ನು ವೀಕ್ಷಿಸುವ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ ಕಾಪು ಕಡಲತೀರದಲ್ಲಿ ಭಾನುವಾರ ಉದ್ಘಾಟನೆಯಾಯಿತು.
ಉಡುಪಿ ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಈ ಸಾಹಸ ಜಲಕ್ರೀಡೆಗೆ ಸೂಕ್ತ ಜಾಗವನ್ನು ಪರಿಶೀಲಿಸಿ ಅಂತಿಮವಾಗಿ ಬೋಟ್ ಫೆಡರೇಷನ್ ನೀಡಿದ ಆಭಿಪ್ರಾಯದಂತೆ ಕಾಪು ಬೀಚ್ ನಿಂದ ಸಮುದ್ರದಲ್ಲಿ ೮ ಕಿಮೀ ದೂರದಲ್ಲಿನ, ಮೂಲ್ಕಿ ಪಾರ್ ಎಂಬಲ್ಲಿ ಸ್ಕೂಬಾ ಡೈವಿಂಗ್ ಗೆ ಅವಕಾಶ ದೊರೆತಿದೆ.

ಇಲ್ಲಿನ ಸಮುದ್ರದಾಳದಲ್ಲಿ ಹವಳದ ದಿಬ್ಬಗಳು, ಆಕರ್ಷಕ ಮೀನುಗಳು ಹಾಗೂ ವೈವಧ್ಯಮಯವಾದ ಜಲ ಜೀವರಾಶಿ ಇದೆ ಅಲ್ಲದೇ ಇಲ್ಲಿ ನೀರಿನಾಳದ ದೃಶ್ಯಗಳು ಇತರೆಡೆಗಿಂತ ಅತ್ಯಂತ ಸ್ಪಷ್ಟವಾಗಿ ತೋರಲಿದೆ
ಸ್ಕೂಬಾ ಡೈವಿಂಗ್ ನೆಡೆಸಲು ವೆಸ್ಟ್ ಕೋ ಅಡ್ವೆಂಚರ್‍ಸ್ ಕಂಪೆನಿ ಗುತ್ತಿಗೆ ಪಡೆದಿದ್ದು, ಇದೇ ಕಂಪನಿ ಗೋವಾ , ಮುಂಬೈ ಮತ್ತು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿದ್ದು, ಉಡುಪಿ ಜಿಲ್ಲಾಡಳಿತದೊಂದಿಗೆ ೩ ವರ್ಷಗಳ ಗುತ್ತಿಗೆ ಪಡೆದುಕೊಂಡಿದೆ.

ಸ್ಕೂಬಾ ಡೈವಿಂಗ್ ಮಾಡಲು ಈಜು ಬಲ್ಲವರಾಗಿರಬೇಕು ಎಂಬ ನಿಯಮವೇನಿಲ್ಲ, 10 ವರ್ಷ ಮೇಲ್ಪಟ್ಟ ಎರೂ ಭಾಗವಹಿಸಬಹುದಾಗಿದ್ದು, 71 ವರ್ಷದ ವೃದ್ದೆ ಒಬ್ಬರೂ ಈಗಲೂ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾರೆ, ಹೃದಯರೋಗ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂಬುದರ ಕುರಿತು ಸ್ವಯಂ ಘೋಷಿತ ಪತ್ರಕ್ಕೆ ಸಹಿ ಮಾಡಬೇಕಾಗುತ್ತದೆ, ನುರಿತ ತರಬೇತುದಾರರ ಇದ್ದು, ಅವರ ಸಹಾಯದಿಂದ ಡೈವಿಂಗ್ ಮಾಡಬಹುದಾಗಿದೆ, ಡೈವಿಂಗ್ ಮಾಡಲು ಅಗತ್ಯವಿರುವ ಎಲ್ಲಾ ರೀತಿಯ, 35 ಲಕ್ಷ ವೆಚ್ಚದ ಜೀವ ರಕ್ಷಕ ಉಪಕರಣಗಳು ಲಭ್ಯವಿದೆ , ಪ್ರಾರಂಭಿಕ ಶುಲ್ಕವಾಗಿ ಒಬ್ಬರಿಗೆ 3500 ರೂ ನಿಗಧಿಪಡಿಸಿದೆ, ಕಾರವಾರದ ನೇತ್ರಾಣಿ ದ್ವೀಪ 6000 ರೂ ದರವಿದೆ , ಮುಂಗಡ ಬುಕ್ಕಿಂಗ್ ಮಾಡಲು ಮೊ. ಸಂ.7057066669 ನ್ನು ಸಂಪರ್ಕಿಸಬಹುದು ಎಂದು ವೆಸ್ಟ್ ಕೋ ಅಡ್ವೆಂಚರ್ ನ ವ್ಯವಸ್ಥಾಪಕ ಪವನ್ ಶೌರಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಪು ಕಡಲತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದು, ಸ್ಕೂಬಾ ಡೈವಿಂಗ್ ಪ್ರವಾಸಿಗರ ಆಕರ್ಷಣಿಯ ಕೇಂದ್ರವಾಗಲಿದೆ, ಜಿಲ್ಲಿಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವುದ ದೃಷ್ಠಿಯಿಂದ ಪಡುಬಿದ್ರೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದ ಶಾಸಕರು ಕಾಪು ಬೀಚ್ ನಲ್ಲಿ ಜನವರಿ ಮಾಹೆಯಲ್ಲಿ ಕಾಪು ಉತ್ಸವ ಏರ್ಪಡಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಪು ಪುರಸಭೆಯ ಅಧ್ಯಕ್ಷೆ ಸೌಮ್ಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಮುಖ್ಯಾಧಿಕಾರಿ ರಾಯಪ್ಪ, ಎಸಿಟಿಯ ಮನೋಹರ್ ಶೆಟ್ಟಿ, ಯತೀಶ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಸ್ವಾಗತಿಸಿ, ವಂದಿಸಿದರು.

Comments are closed.