ನವದೆಹಲಿ: ಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದ ವೇಳೆ ಡಗೌಟ್‌ನಲ್ಲಿ ಕುಳಿತುಕೊಂಡು ವಾಕಿ-ಟಾಕಿ ಬಳಕೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕ್ಲೀನ್‌ಚಿಟ್ ನೀಡಿದೆ.
ಡಗೌಟ್‌ನಲ್ಲಿ ಸಹ ಆಟಗಾರರೊಂದಿಗೆ ಕುಳಿತುಕೊಂಡಿದ್ದ ವಿರಾಟ್ ಕೊಹ್ಲಿ ವೈರ್‌ಲೆಸ್ ಉಪಕರಣದಲ್ಲಿ ಪೆವಿಲಿಯನ್‌ಗೆ ಸಂಪರ್ಕ ಮಾಡುತ್ತಿದ್ದರು. ಇದು ಟಿ.ವಿಯಲ್ಲಿ ಪ್ರಸಾರವಾಗಿತ್ತು. ಅಲ್ಲದೆ ವಿರಾಟ್ ಕೊಹ್ಲಿ ವಾಕಿ-ಟಾಕಿ ಬಳಕೆ ಮಾಡುವ ಮೂಲಕ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಸರು ಹೇಳಲು ಇಚ್ಚಿಸಿದ ಐಸಿಸಿ ಅಧಿಕಾರಿಯೊಬ್ಬರು, ಪಂದ್ಯದ ವೇಳೆ ಅಂಪೈರ್, ಮ್ಯಾಚ್ ರೆಫರಿ ಮತ್ತು ಆಟಗಾರರು ವಾಕಿ-ಟಾಕಿ ಬಳಕೆ ಮಾಡಬಹುದಾಗಿದೆ. ವಿರಾಟ್ ಕೊಹ್ಲಿ ಅರು ವಾಕಿ-ಟಾಕಿ ಬಳಸಲು ಐಸಿಸಿ ಭ್ರಷ್ಟಾಚಾರ ವಿರೋಧಿ ಘಟಕ ಮತ್ತು ಬಿಸಿಸಿಐಯಿಂದ ಈ ಮೊದಲೇ ಅನುಮತಿ ಪಡೆದಿದ್ದರು ಎಂದು ಪಿಟಿಐ ತಿಳಿಸಿದ್ದಾರೆ.
ನಿನ್ನೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ 53 ರನ್ ಗಳಿಂದ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.