ಕ್ರೀಡೆ

ಇಂದಿಗೂ ಮುರಿಯಲು ಸಾಧ್ಯವಾಗದ ನೆಹ್ರಾ ದಾಖಲೆ

Pinterest LinkedIn Tumblr


ಹೊಸದಿಲ್ಲಿ: ಭಾರತದ ಹಿರಿಯ ಅನುಭವಿ ಎಡಗೈ ವೇಗಿ ಆಶಿಶ್ ನೆಹ್ರಾ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ತವರಿನ ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಇಂದು (ಬುಧವಾರ) ನಡೆಯಲಿರುವ ಮೊದಲ ಟ್ವೆಂಟಿ-20 ಪಂದ್ಯ ನೆಹ್ರಾ ಕ್ರಿಕೆಟ್ ಜೀವನದ ಕೊನೆಯ ಪಂದ್ಯವಾಗಿರಲಿದೆ.

ಅಂದ ಹಾಗೆ ಸರಿ ಸುಮಾರು 14 ವರ್ಷಗಳ ಹಿಂದೆ ಡರ್ಬನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯವನ್ನು ಬಹುಶ: ಯಾರೂ ಮರೆತಿರಕ್ಕಿಲ್ಲ. ಅಂದು ನಡೆದಿದ್ದ 2003ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಶಿಶ್ ನೆಹ್ರಾ, 23 ರನ್ ತೆತ್ತು ಆರು ವಿಕೆಟ್‌ಗಳನ್ನು ಕಿತ್ತು ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ್ದರು.

ಇಂದಿಗೂ ನೆಹ್ರಾ ದಾಖಲೇ ಮಾಸದೇ ಉಳಿದಿರುವುದು ಗಮನಾರ್ಹ. ನೆಹ್ರಾಗಿಂತಲೂ ಮೊದಲು ಹಾಗೂ ಬಳಿಕ ಅನೇಕ ಬೌಲರ್‌ಗಳು ಬಂದು ಹೋಗಿದ್ದಾರೆ. ಆದರೆ ವಿಶ್ವಕಪ್‌ನಲ್ಲಿ ನೆಹ್ರಾ ಹೆಸರಲ್ಲಿರುವ ಭಾರತದ ಶ್ರೇಷ್ಠ ಬೌಲಿಂಗ್ ಸಾಧನೆಯನ್ನು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಲಿಲ್ಲ.

ತಮ್ಮ 10 ಓವರ್‌ಗಳ ಕೋಟಾದಲ್ಲಿ ಎರಡು ಮೇಡನ್ ಸೇರಿದಂತೆ 23 ರನ್ ನೀಡಿದ್ದ ನೆಹ್ರಾ ಆರು ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಪಟ್ಟಿಯಲ್ಲಿ 1999ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ವೆಂಕೆಟೇಶ್ ಪ್ರಸಾದ್ 27 ರನ್ ತೆತ್ತು ಐದು ವಿಕೆಟ್‌ಗಳನ್ನು ಪಡೆದಿರುವುದು ನೆಹ್ರಾ ಬಳಿಕದ ಶ್ರೇಷ್ಠ ಸಾಧನೆಯಾಗಿದೆ.

ತಮ್ಮ 18 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ನೆಹ್ರಾ, ಭಾರತದ ಶ್ರೇಷ್ಠ ಎಡಗೈ ಬೌಲರ್‌ಗಳ ಸಾಲಿಗೆ ಸೇರಲಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.

ಟೆಸ್ಟ್ ಬೌಲಿಂಗ್ ವೃತ್ತಿ ಜೀವನ
ಪಂದ್ಯ 17
ವಿಕೆಟ್ 44
ಶ್ರೇಷ್ಠ ಬೌಲಿಂಗ್ 4/72
ಎಕಾನಮಿ 3.24

ಏಕದಿನ ಬೌಲಿಂಗ್ ವೃತ್ತಿ ಜೀವನ
ಪಂದ್ಯ 120
ವಿಕೆಟ್ 157
ಶ್ರೇಷ್ಠ ಬೌಲಿಂಗ್ 6/23
ಎಕಾನಮಿ 5.19
5 ವಿಕೆಟ್ 2 ಸಲ

ಟಿ-20 ಬೌಲಿಂಗ್ ವೃತ್ತಿ ಜೀವನ
ಪಂದ್ಯ 26
ವಿಕೆಟ್ 34
ಶ್ರೇಷ್ಠ ಬೌಲಿಂಗ್ 3/19
ಎಕಾನಮಿ 7.75

Comments are closed.