ಕ್ರೀಡೆ

ಫೋರ್ಬ್ಸ್ ವಿಶ್ವದ ಮೌಲ್ಯಯುತ ಕ್ರೀಡಾಪಟುಗಳ ಪಟ್ಟಿ: ಮೆಸ್ಸಿ ಹಿಂದಿಕ್ಕಿದ ವಿರಾಟ್ ಕೊಹ್ಲಿ

Pinterest LinkedIn Tumblr


ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅರ್ಜೆಂಟೀನಾ ಫುಟ್‍ ಬಾಲ್ ತಾರೆ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ. ಫೋರ್ಬ್ಸ್ ನಿಯತಕಾಲಿಕ ಬಿಡುಗದೇ ಮಾಡಿರುವ ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ 7ನೇ ಸ್ಥಾನ ಪಡೆದಿದ್ದು ಮೆಸ್ಸಿ 9ನೇ ಸ್ಥಾನದಲ್ಲಿದ್ದಾರೆ.

ಆಟಗಾರರ ವೇತನ, ಬೋನಸ್, ವಿವಿಧ ಆದಾಯ ಮೂಲಗಳನ್ನು ಲೆಕ್ಕಹಾಕಿ ಪಟ್ಟಿ ರಚಿಸುವ ಫೋರ್ಬ್ಸ್ ಈ ಬಾರಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸ್ವಿಜರ್‍ಲ್ಯಾಂಡಿನ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಮೊದಲ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾಪಟುಗಳ ಪಟ್ಟಿ ತಾಪ್ ಆಟಗಾರರ ವಿವರ ಹೀಗಿದೆ-

ರೋಜರ್ ಫೆಡರರ್ – 37.2 ದಶಲಕ್ಷ ಡಾಲರ್ (ಅಂದಾಜು 241 ಕೋಟಿ ರೂ.)
ರೋಜರ್ ಫೆಡರರ್ – 37.2 ದಶಲಕ್ಷ ಡಾಲರ್ (ಅಂದಾಜು 241 ಕೋಟಿ ರೂ.)
ಉಸೇನ್ ಬೋಲ್ಟ್ – 27 ದಶಲಕ್ಷ ಡಾಲರ್ (ಅಂದಾಜು 175 ಕೋಟಿ ರೂ.)
ಕ್ರಿಶ್ಚಿಯಾನೋ ರೊನಾಲ್ಡೊ – 21.5 ದಶಲಕ್ಷ ಡಾಲರ್ (ಅಂದಾಜು 139 ಕೋಟಿ ರೂ.)
ಫಿಲ್ ಮೈಕ್ಲೆಸನ್ – 19.6 ದಶಲಕ್ಷ ಡಾಲರ್(ಅಂದಾಜು127 ಕೋಟಿ ರೂ.)
ಫಿಲ್ ಮೈಕ್ಲೆಸನ್ – 19.6 ದಶಲಕ್ಷ ಡಾಲರ್(ಅಂದಾಜು127 ಕೋಟಿ ರೂ.)
ವಿರಾಟ್ ಕೊಹ್ಲಿ – 14.5 ದಶಲಕ್ಷ ಡಾಲರ್(ಅಂದಾಜು 94 ಕೋಟಿ ರೂ.)
ರೋರಿ ಮೆಕ್ರಾಯ್ – 13.6 ದಶಲಕ್ಷ ಡಾಲರ್(ಅಂದಾಜು 88 ಕೋಟಿ ರೂ.)
ಲಿಯೋನೆಲ್ ಮೆಸ್ಸಿ -13.5 ದಶಲಕ್ಷ ಡಾಲರ್(ಅಂದಾಜು 87 ಕೋಟಿ ರೂ.)
ಸ್ಟೆಫ್ ಕರ್ರಿ – 13.4 ದಶಲಕ್ಷ ಡಾಲರ್(ಅಂದಾಜು 86 ಕೋಟಿ ರೂ.)

Comments are closed.