ಕ್ರೀಡೆ

ದೀಪಾವಳಿಗೆ ವಿರಾಟ್ ಕೋಹ್ಲಿ ವಿಶೇಷ ಸಂದೇಶ

Pinterest LinkedIn Tumblr


ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ದೀಪಾವಳಿ ಹಬ್ಬದ ಸುಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಸಂದೇಶ ರವಾನಿಸಿದ್ದಾರೆ.

ಬೆಳಕಿನ ಹಬ್ಬವನ್ನು ಪಸರಿಸಲು ಕರೆ ನೀಡಿರುವ ಕೋಹ್ಲಿ ಹೆಚ್ಚು ಶಬ್ದ ಮಾಲಿನ್ಯವನ್ನುಂಟು ಮಾಡುವ ಪಟಾಕಿಗಳನ್ನು ಬಳಕೆ ಮಾಡದಂತೆ ಬಯಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ದೀಪಾವಳಿ ಹಬ್ಬದ ಸುಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಸಂದೇಶ ರವಾನಿಸಿದ್ದಾರೆ. ಏತ್ಮನ್ಮಧ್ಯೆ ದಿಲ್ಲಿಯಲ್ಲಿ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪಟಾಕಿಗಳ ಬಳಕೆಗೆ ದಿಲ್ಲಿ ಹೈಕೋರ್ಟ್ ತಡೆಯೊಡ್ಡಿತ್ತು.

ಇದಕ್ಕೂ ಮೊದಲು ಯುವರಾಜ್ ಸಿಂಗ್ ಸಹ ಪಟಾಕಿಗಳನ್ನು ಸಿಡಿಸದಂತೆ ವಿನಂತಿ ಮಾಡಿಕೊಂಡಿದ್ದರು.

ಭಾರತೀಯ ಕ್ರಿಕೆಟ್ ತಂಡದ ಇತರೆ ಆಟಗಾರರು ಸಹ ದೇಶದ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ಕೋರಿದ್ದಾರೆ.

Comments are closed.