ಕ್ರೀಡೆ

ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಹಶೀಮ್ ಆಮ್ಲಾ

Pinterest LinkedIn Tumblr

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಏಕದಿನ ಪಂದ್ಯದಲ್ಲಿ 26 ನೇ ಶತಕ ದಾಖಲಿಸಿದ ದ. ಆಫ್ರಿಕಾದ ಬ್ಯಾಟಿಂಗ್ ಕಲಿ ಹಶೀಮ್ ಆಮ್ಲಾ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

ಏಕದಿನ ಪಂದ್ಯದಲ್ಲಿ ಅತೀ ವೇಗವಾಗಿ 26 ಶತಕ ಪೂರೈಸಿದ ದಾಖಲೆ ಇದುವರೆಗೆ ಕೊಹ್ಲಿ ಹೆಸರಿನಲ್ಲಿತ್ತು. ಅದನ್ನು ಆಮ್ಲಾ ಇದೀಗ ತಮ್ಮ ಖಾತೆಗೆ ಬರೆದುಕೊಂಡಿದ್ದಾರೆ.

ಈಗಾಗಲೇ ಅತೀ ವೇಗವಾಗಿ 6000, 5000, 4000 ರನ್ ಪೂರೈಸಿದವರ ಪೈಕಿ ಆಮ್ಲಾ ಕೊಹ್ಲಿಯನ್ನು ಹಿಂದಿಕ್ಕಿದ್ದರು. ಇದೀಗ ಶತಕಗಳ ಸರದಿ. ಈ ದಾಖಲೆಯನ್ನು ಅವರು ಕೇವಲ 150 ಇನಿಂಗ್ಸ್ ಗಳಲ್ಲಿ ಪೂರೈಸಿದ್ದಾರೆ. ಕೊಹ್ಲಿಗೆ 169 ಇನಿಂಗ್ಸ್ ಬೇಕಾಗಿತ್ತು.

Comments are closed.