ಕ್ರೀಡೆ

ಅಂಧರ ಟ್ವೆಂಟಿ–20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತಕ್ಕೆ ಜಯ

Pinterest LinkedIn Tumblr


ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂಧರ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದೆ.

ನಾಲ್ಕು ವರ್ಷಗಳ ಹಿಂದೆ ತವರಿನಲ್ಲಿ ವಿಶ್ವಕಪ್‌ ಗೆದ್ದು ಬೀಗಿದ್ದ ಭಾರತ ಮತ್ತೆ ಅದೇ ಸಂಭ್ರಮ ಮರುಕಳಿಕಸಿದೆ.

ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 197 ರನ್‌ ಗಳಿಸಿತ್ತು. ಸವಾಲಿನ ಮೊತ್ತವನ್ನು ಬೆನ್ನತ್ತಿದ ಭಾರತ ಪ್ರಕಾಶ್‌ ಜಯರಾಮಯ್ಯ (99) ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ಎರಡನೇ ಬಾರಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 198 ರನ್‌ ಗುರಿ ಬೆನ್ನಟ್ಟಿದ ಭಾರತ ಒಂದು ವಿಕೆಟ್‌ ಕಳೆದುಕೊಂಡು17.4 ಓವರ್‌ಗಳಲ್ಲಿ 200 ರನ್‌ ಗಳಿಸಿ ಗೆಲುವಿನ ನಗೆಬೀರಿತು.

Comments are closed.