ಕ್ರೀಡೆ

ಕೊಹ್ಲಿ ನೆನೆದರೆ ನಡುಕ: ಆಸ್ಟ್ರೇಲಿಯ ಕೋಚ್‌ ಲೆಹ್ಮನ್‌

Pinterest LinkedIn Tumblr

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಆಟ ನೆನೆದರೆ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟುತ್ತದೆ.

‘ಕೊಹ್ಲಿ ಆಟಕ್ಕೆ ಕಡಿವಾಣ ಹಾಕಲು ನಮಗೆ ಅದೃಷ್ಟದ ನೆರವು ಬೇಕು. ಅವರ ಆಕ್ರಮಣಕಾರಿ ಆಟ ಎದುರಾಳಿ ತಂಡದ ನಿದ್ದೆಗೆಡಿಸುವುದರಲ್ಲಿ ಅನುಮಾನವೇ ಇಲ್ಲ’ ಎಂದು ಆಸ್ಟ್ರೇಲಿಯ ತಂಡದ ಕೋಚ್‌ ಡೆರಿನ್‌ ಲೆಹ್ಮನ್‌ ಹೇಳಿದ್ದಾರೆ.

ಫೆ. 23ರಿಂದ ಪುಣೆಯಲ್ಲಿ ಆರಂಭವಾಗಲಿರುವ ಭಾರತ–ಆಸ್ಟ್ರೇಲಿಯ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮೊದಲೇ ಕೊಹ್ಲಿ ನಾಯಕತ್ವ ಮತ್ತು ಬ್ಯಾಟಿಂಗ್‌ ಆಸ್ಟ್ರೇಲಿಯನ್ನರ ನಿದ್ದೆಗೆಡಿಸಿದೆ. ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್‌ ವಿರುದ್ಧದ 4–0 ಸರಣಿ ಗೆಲುವು ಮತ್ತು ಸರಣಿಯಲ್ಲಿ ಕೊಹ್ಲಿ ಗಳಿಸಿದ ಒಟ್ಟು 655 ರನ್‌ಗಳು ಅವರು ಅತ್ಯುತ್ತಮ ಫಾರ್ಮ್‌ನಲ್ಲಿರುವುದರ ಸಂಕೇತ.

’28ರ ಹರೆಯದ ವಿರಾಟ್‌ ಶೇಕಡಾ 60.76 ಸರಾಸರಿಯಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ 15 ಶತಕ ಬಾರಿಸಿದ್ದಾರೆ. ಅದರಲ್ಲಿ 6 ಶತಕ ಆಸ್ಟ್ರೇಲಿಯ ವಿರುದ್ಧ ಗಳಿಸಿರುವುದು ವಿಶೇಷ. ತರಬೇತಿ ಸಮಯದಲ್ಲಿ ಆಸ್ಟ್ರೇಲಿಯ ತಂಡದ ಆಟಗಾರರಿಗೆ ಕೊಹ್ಲಿ ಬ್ಯಾಟಿಂಗ್‌ ವಿಡಿಯೊಗಳನ್ನು ತೋರಿಸಲಾಗುತ್ತಿದೆ. ಅವರ ರನ್‌ ಗಳಿಕೆಗೆ ಕಡಿವಾಣ ಹಾಕಲು ತಂತ್ರ ರೂಪಿಸುತ್ತಿದ್ದೇವೆ’ ಎಂದು ಲೆಹ್ಮನ್‌ ಹೇಳಿದ್ದಾರೆ.

Comments are closed.