ಕ್ರೀಡೆ

ಸುರೇಶ್ ರೈನಾ ಹೊಡೆದ ಸಿಕ್ಸರ್ ಬಾಲ್ ಬಿತ್ತು 6 ವರ್ಷದ ಬಾಲಕನ ಮೇಲೆ …ಮುಂದೆ ಏನಾಯಿತು…!

Pinterest LinkedIn Tumblr

ಬೆಂಗಳೂರು: ಟೀಂ ಇಂಡಿಯಾ-ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಗ್ಯಾಲರಿಯಲ್ಲಿ ತುಂಬಿದ್ದರು. ಪಂದ್ಯವನ್ನು ಕಣ್ತುಂಬಿಕೊಂಡರು.

ಪಂದ್ಯದ ನಡುವೆ ಸುರೇಶ್ ರೈನಾ ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದು ಅವರ ಸಿಡಿಸಿದ ಒಂದು ಚೆಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ 6 ವರ್ಷದ ಬಾಲಕನ ಎಡಗಾಲಿಗೆ ತಗುಲಿ ಗಾಯಗೊಂಡಿದ್ದ. ಈ ವೇಳೆ ಆತನನ್ನು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಶಿಯೇಷನ್ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಯಿತು. ಡಾ. ಮ್ಯಾಥ್ಯೂ ಕ್ಯಾಂಡಿ ಅವರು ಬಾಲಕನಿಗೆ 10 ನಿಮಿಷಗಳವರೆಗೆ ಚಿಕಿತ್ಸೆ ನೀಡಿದರು. ಈ ವೇಳೆ ಬಾಲಕ ನನಗೆ ನೋವಿಲ್ಲ ನಾನು. ಪಂದ್ಯವನ್ನು ನೋಡಬೇಕು ಎಂದು ಹಠ ಹಿಡಿದಿದ್ದಾನೆ. ಹೆಚ್ಚು ಗಾಯಗೊಂಡಿರ ಕಾರಣ ಬಾಲಕನಿಗೆ ಪ್ರಥಮ ಚಿಕಿತ್ಸೆಯನ್ನು ಮಾತ್ರ ನೀಡಿ ಮತ್ತೇ ಗ್ಯಾಲರಿಗೆ ಕಳುಹಿಸಿದರು.

ಚೆಂಡು ಬಾಲಕನ ಕಾಲಿಗೆ ತಗುಲಿದ್ದು ಒಳ್ಳೆಯದು. ಚೆಂಡು ಅಪ್ಪಿತಪ್ಪಿ ತಲೆಗೆ ಅಥವಾ ಕುತ್ತಿಗೆಗೆ ತಲುಗಿದ್ದರೇ ಅದನ್ನು ತಡೆದುಕೊಳ್ಳುವ ಶಕ್ತಿ ಬಾಲಕನಿಗಿರಲಿಲ್ಲ ಎಂದು ವೈದ್ಯರು ಹೇಳಿದರು.

ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2012ರ ಏಪ್ರಿಲ್ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪುಣೇ ವಾರಿಯರ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಸಿಡಿಸಿದ್ದ ಚೆಂಡು ಗ್ಯಾಲರಿಯಲ್ಲಿದ್ದ 10 ವರ್ಷದ ಬಾಲಕಿ ಹಣೆಗೆ ಬಡಿದಿತ್ತು.

Comments are closed.