ಕ್ರೀಡೆ

ಇಂಗ್ಲೆಂಡ್‌ ವಿರುದ್ಧದ ಟ್ವೆಂಟಿ–20 ಸರಣಿಯನ್ನು ಗೆದ್ದುಕೊಂಡ ಭಾರತ

Pinterest LinkedIn Tumblr

ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡದವರು ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯನ್ನು 2–1ರಲ್ಲಿ ಗೆದ್ದುಕೊಂಡರು.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ 6 ವಿಕೆಟ್‌ಗಳನ್ನು ಉರುಳಿಸಿ ಅದ್ಭುತ ಕೈಚಳಕ ತೋರಿದರು. ಚಾಹಲ್‌ ಸಾಧನೆಯ ನೆರವಿನಿಂದ ಭಾರತದ ಆಟಗಾರರು 75 ರನ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿದರು.

ಇದರಿಂದ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಮೂರೂ ಮಾದರಿಗಳಲ್ಲಿ ನಾಯಕರಾಗಿ ಸರಣಿ ಗೆದ್ದ ಸಾಧನೆ ಮಾಡಿದಂತಾಯಿತು. ವಿಶೇಷವೆಂದರೆ ಕೊಹ್ಲಿ ನಾಯಕರಾದ ಬಳಿಕ ಭಾರತ ಆಡಿದ ಮೊದಲ ಏಕದಿನ ಮತ್ತು ಚುಟುಕು ಮಾದರಿಯ ಸರಣಿ ಇದಾಗಿದೆ.

Comments are closed.